ಟೋಕಿಯೋ: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ನೀರಜ್ ಚೋಪ್ರಾಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ.
ಚಿನ್ನದ ಪದಕವನ್ನು ಗೆದ್ದು ದೇಶದ ಕೀರ್ತಿಯನ್ನು ಎತ್ತಿಹಿಡಿದ ನೀರಜ್ ಚೋಪ್ರಾಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯವ್ಯಕ್ತಿಗಳು ಟ್ವೀಟ್ ಮಾಡಿ ಅಭಿನಂದಿಸುತ್ತಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಕೂಡ ನೀರಜ್ಗೆ XUV 700 ಎಂಬ ದುಬಾರಿ ಕಾರು ಗಿಫ್ಟ್ ನೀಡುವುದಾಗಿ ಘೋಷಿಸುವ ಮೂಲಕ ಚಿನ್ನ ಗೆದ್ದು ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ನೀರಜ್ಗೆ ಶುಭಾಶಯ ಕೋರಿದ್ದಾರೆ. ಹೌದು, ನಮ್ಮ ಬಂಗಾರದ ಕ್ರೀಡಾಪಟುವಿಗೆ XUV 7OO ಕಾರು ಉಡುಗೊರೆಯಾಗಿ ನೀಡುತ್ತಿರುವುದು ನನಗೆ ಹೆಮ್ಮೆಯ ವಿಷಯ. ಆತನಿಗಾಗಿ ಈ ಕಾರನ್ನು ತಯಾರಿಸಿ ಎಂದು ಟ್ವೀಟ್ ಮಾಡಿ ಚಿನ್ನದ ಹುಡುಗನ ಬೆನ್ನು ತಟ್ಟಿದ್ದಾರೆ.
23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರೆ ಮೂರನೇ ಪ್ರಯತ್ನದಲ್ಲಿ 76.79 ಮೀ.ಗಿಂತ ಕಡಿಮೆ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತಲೂ ಹೆಚ್ಚು ದೂರ ಭರ್ಚಿಯನ್ನು ಏಸೆದಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಇನ್ನು ಸಾಧನೆಗೆ ಮೆಚ್ಚಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.