ಟೋಕಿಯೋ:ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೋಕಿಯೋ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದು, ಇದೀಗ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಸೆಮಿಫೈನಲ್ನಲ್ಲಿ ಅಜೆರ್ಬೈಜಾನ್ನ ಹಾಜಿ ಅಲಿಯೇವ್ ವಿರುದ್ಧ ನಡೆದ ಪಂದ್ಯದಲ್ಲಿ 5-12 ಅಂತರದಿಂದ ಸೋಲು ಕಂಡಿದ್ದಾರೆ.
ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಬಜರಂಗ್ ಪೂನಿಯಾ ಇರಾನ್ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವು ದಾಖಲು ಮಾಡಿ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದರು.
ಇದನ್ನೂ ಓದಿರಿ: ಮೋದಿ ಜೊತೆಗಿನ ದೂರವಾಣಿ ಸಂಭಾಷಣೆ ವೇಳೆ ಬಿಕ್ಕಿಬಿಕ್ಕಿ ಅತ್ತ ಮಹಿಳಾ ಹಾಕಿ ಪ್ಲೇಯರ್ಸ್.. ಧೈರ್ಯ ತುಂಬಿದ ನಮೋ!
ಇಂದೇ ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವಾಡಿದ ಬಜರಂಗ್ ಪುನಿಯಾ, ಮೊದಲ ರೌಂಡ್ನಲ್ಲಿ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ರೌಂಡ್ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಬಜರಂಗ್, ಅಂತಿಮವಾಗಿ 2-1 ಅಂತರದಿಂದ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ, ಇದೀಗ ಸೆಮೀಸ್ನಲ್ಲಿ ಸೋಲು ಕಂಡಿದ್ದು, ಕಂಚಿಗಾಗಿ ಸೆಣಸಾಟ ನಡೆಸಲಿದ್ದಾರೆ.