ಟೋಕಿಯೋ:ಇಂದು ನಡೆದ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಭಾರತದ ಮಹಿಳಾ ಹಾಕಿ ತಂಡ ಉತ್ತಮವಾಗಿ ಪ್ರದರ್ಶನ ನೀಡುವುದರ ಮೂಲಕ ಸೌತ್ ಆಫ್ರಿಕಾ ವಿರುದ್ಧ 4-3 ಅಂತರಿಂದ ಭರ್ಜರಿ ಜಯ ಸಾಧಿಸಿತು.
ಗ್ರೂಪ್ ‘ಎ’ ವಿಭಾಗದಲ್ಲಿ ಭಾರತಕ್ಕೆ ಇದು ಎರಡನೇ ಜಯವಾಗಿದೆ. ಮೊದಲಾರ್ಧದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡ 2-2 ಗೋಲ್ಗಳನ್ನು ಪಡೆದು ಆಟ ಮುಂದುವರೆಸಿದ್ದವು. ಬಳಿಕ ಆಟ ರೋಚಕತೆಯಿಂದ ಕೂಡಿತ್ತು. ಭಾರತ ಮತ್ತು ಸೌತ್ ಆಫ್ರಿಕಾ ತಂಡ 3-3 ಗೋಲ್ಗಳನ್ನು ಗಳಿಸಿ ಮುನ್ನಡೆಯುತ್ತಿದ್ದವು. ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ಕಟಾರಿಯಾ ಗೋಲು ಬಾರಿಸಿದರು. ಈ ಮೂಲಕ ಭಾರತ ತಂಡ 4-3 ರಿಂದ ಮುನ್ನಡೆ ಪಡೆಯಿತು. ಅಂತಿಮವಾಗಿ ಭಾರಿ ಒತ್ತಡದಲ್ಲಿದ್ದ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ 4-3 ಮೂಲಕ ರೋಚಕ ಜಯ ಸಾಧಿಸಿತು.