ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನ ಬಾಕ್ಸಿಂಗ್ನ ಸೆಮಿಫೈನಲ್ನಲ್ಲಿ ಭಾರತದ ಲವ್ಲಿನಾ ಬೋರ್ಗಹೈನ್ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದರೂ, ಭಾರತಕ್ಕೆ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಟರ್ಕಿಯ ಬುಸೆನಾಜ್ ಸುರ್ಮನೆಲಿ ವಿರುದ್ಧ 64-69 ಕೆಜಿ ವಿಭಾಗದಲ್ಲಿ ಸೆಮಿಫೈನಲ್ನಲ್ಲಿ ಲವ್ಲಿನಾ 0-5 ಅಂಕಗಳಿಂದ ಪರಾಭವಗೊಂಡರು. ಆದರೆ, ಇವರ ಸಾಧನೆಗೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಾಕ್ಸರ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಕಂಚಿನ ಪದಕ ಗೆದ್ದಿರುವುದಕ್ಕಾಗಿ ಅಭಿನಂದನೆಗಳು ಎಂದಿದ್ದಾರೆ. ನಿಮ್ಮ ಗೆಲುವು ನಮ್ಮ ನಾರಿ ಶಕ್ತಿಯ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ. ಜೊತೆಗೆ ನಿಮ್ಮ ಯಶಸ್ಸು ಪ್ರತಿಯೊಬ್ಬ ಭಾರತೀಯ ವಿಶೇಷವಾಗಿ ಅಸ್ಸೋಂ ಹಾಗೂ ಈಶಾನ್ಯ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ನಮೋ ತಿಳಿಸಿದ್ದಾರೆ.
ಸೆಮಿಫೈನಲ್ನಲ್ಲಿ ಸೋತ ಲವ್ಲಿನಾ ಕಂಚಿನ ಪದಕ ಗೆಲ್ಲುತ್ತಿದ್ದಂತೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ನಿಮ್ಮ ಕಠಿಣ ಪರಿಶ್ರಮ ಹಾಗೂ ಅದ್ಭುತ ನಿರ್ಣಯದಿಂದ ಇಡೀ ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ. ಒಲಿಂಪಿಕ್ಸ್ನಲ್ಲಿ ನೀವು ಗೆದ್ದಿರುವ ಪದಕ ದೇಶದ ಯುವಕರಿಗೆ ವಿಶೇಷವಾಗಿ ಯುವತಿಯರಿಗೆ ಪ್ರೇರಣೆಯಾಗಲಿದೆ ಎಂದಿದ್ದಾರೆ.
ಇದನ್ನೂ ಓದಿರಿ: Tokyo Olympics Boxing: ಸೆಮೀಸ್‌ನಲ್ಲಿ ಸೋತರೂ ಭಾರತಕ್ಕೆ 3ನೇ ಪದಕ ತಂದುಕೊಟ್ಟ ಲವ್ಲಿನಾ
ಲವ್ಲಿನಾ ಗೆಲುವಿಗೆ ಬಿಸಿಸಿಐ ಕಾರ್ಯದರ್ಶಿ, ಕೇಂದ್ರ ಕ್ರೀಡಾ ಸಚಿವ ಠಾಕೂರ್, ಮಾಜಿ ಒಲಿಂಪಿಕ್ಸ್ ವಿಜೇತ ವಿಜೇಂದರ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 23 ವರ್ಷದ ಲವ್ಲಿನಾ ಇದೇ ವಿಚಾರವಾಗಿ ಮಾತನಾಡಿದ್ದು, ನಾನು ಚಿನ್ನದ ಪದಕ ಗೆದ್ದಿಲ್ಲ ಎಂಬ ನಿರಾಸೆಯಿದೆ. ಆದರೆ, ಕಂಚಿನ ಪದಕ ಗೆದ್ದಿರುವ ಸಮಾಧಾನವಿದೆ ಎಂದಿದ್ದಾರೆ.