ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿರುವ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವುದು ಐತಿಹಾಸಿಕವಾಗಿದೆ.
ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 22 ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಏಕಾಂಗಿಯಾಗಿ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ಹೊಡೆದು ಗೆಲುವಿಗೆ ಬುನಾದಿ ಹಾಕಿದರು. ಅವರು ಹೊಡೆದ ಗೋಲಿನ ದೃಶ್ಯದ ವಿಡಿಯೋ ಇಲ್ಲಿದೆ.
1980ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಅದಾದ ಬಳಿಕ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಇಂದು ಭಾರತದ ಮಹಿಳೆಯರು ಈ ಸಾಧನೆ ಮಾಡಿದರು. ಜಗತ್ತಿನ ನಂಬರ್ 1 ತಂಡದ ವಿರುದ್ಧ ಅಮೋಘ ಪ್ರದರ್ಶನ ನೀಡಿರುವ ಭಾರತೀಯ ಆಟಗಾರ್ತಿಯರು ಭರ್ಜರಿ ಗೆಲುವು ದಾಖಲಿಸಿ ಭಾವುಕರಾದರು.
ಇದನ್ನೂ ಓದಿ: ಚಕ್‌ದೇ ಇಂಡಿಯಾ! ಬಲಾಢ್ಯ ಆಸ್ಟ್ರೇಲಿಯಾ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ 'ಭಾರತೀ'ಯರು!
ಆಗಸ್ಟ್ 4ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅರ್ಜೆಂಟೀನಾ ಸವಾಲು ಎದುರಿಸಲಿದೆ. ಮಗದೊಂದು ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ ತಂಡವು ಜರ್ಮನಿ ವಿರುದ್ಧ 3-0 ಗೋಲುಗಳ ಅಂತರದ ಗೆಲುವು ದಾಖಲಿಸಿದೆ. ಆ ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಆಗಸ್ಟ್ 6ರಂದು ಭಾರತ ತಂಡ ಕಣಕ್ಕಿಳಿಯಲಿದೆ.