ಕರ್ನಾಟಕ

karnataka

ETV Bharat / sports

ಭಾರತೀಯರ ಕನಸುಗಳ ಭಾರವನ್ನು ಗೆಲುವಾಗಿ ಪರಿವರ್ತಿಸಿದ ಮೀರಾಬಾಯಿ ಚನು: ಕೊಹ್ಲಿ ಗುಣಗಾನ - ಬೆಳ್ಳಿ ಗೆದ್ದ ಮೀರಾ ಬಾಯಿ ಚನು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದುಕೊಟ್ಟ ವೇಟ್‌ ಲಿಫ್ಟರ್‌ ಮೀರಾಬಾಯಿ ಚನು ಅವರಿಗೆ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ನಿಂದ ವಿಶೇಷ ಸಂದೇಶ ರವಾನಿಸಿದ್ದಾರೆ.

mira bai chanu
mira bai chanu

By

Published : Jul 26, 2021, 3:28 PM IST

ನವದೆಹಲಿ:ವೇಟ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವ ಮೂಲಕ ಕೋಟ್ಯಂತರ ಭಾರತೀಯರ ಮನಗೆದ್ದಿರುವ ಮೀರಾಬಾಯಿಗೆ ಈಗಾಗಲೇ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

ಇದರ ಬೆನ್ನಲ್ಲೇ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಇಂಗ್ಲೆಂಡ್​ನಿಂದಲೇ ವಿಶೇಷ ವಿಡಿಯೋ ಸಂದೇಶ ರವಾನಿಸಿದ್ದು, ಬಿಸಿಸಿಐ ಹಾಗು ಭಾರತೀಯ ಕ್ರಿಕೆಟ್ ಪ್ರಾಧಿಕಾರ (Sports Authority of India) ತನ್ನ ಟ್ವಿಟರ್ ಅಕೌಂಟ್​ನಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: Tokyo Olympics: ಮೀರಾಬಾಯಿ ಚನುಗೆ ಬೆಳ್ಳಿ ಬದಲು ಚಿನ್ನದ ಪದಕ! ಕಾರಣ?

ಕೊಹ್ಲಿ ಸಂದೇಶವೇನು?

ಇಡೀ ಭಾರತದ ಕನಸುಗಳ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅದನ್ನು ಗೆಲುವಾಗಿ ಪರಿವರ್ತನೆ ಮಾಡಿರುವ ಮೀರಾ ಕುಮಾರಿ ಅವರಿಗೆ ಅಭಿನಂದನೆಗಳು. ಇದರ ಜೊತೆಗೆ ಭಾರತೀಯರು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಮ್ಮ ಅಥ್ಲೀಟ್ಸ್​ ಪ್ರದರ್ಶನಕ್ಕೆ ಬೆಂಬಲ ಸೂಚಿಸಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details