ನವದೆಹಲಿ:ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಪದಕ ಗೆದ್ದು ತಾಯ್ನಾಡಿಗೆ ಹಿಂದಿರುಗಿರುವ ಮೂವರು ಅಥ್ಲೀಟ್ಸ್ಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ದೆಹಲಿ ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ಅವರನ್ನ ಆತ್ಮೀಯವಾಗಿ ಸ್ವಾಗತ ಮಾಡಿಕೊಳ್ಳಲಾಯಿತು.
ಪದಕ ಗೆದ್ದು ತಾಯ್ನಾಡಿಗೆ ಬಂದ ಅಥ್ಲೀಟ್ಸ್ ಜಾವಲಿನ್ ಥ್ರೋನಲ್ಲಿ ಸುಮಿತ್ ಚಿನ್ನದ ಪದಕ ಗೆದ್ದಿದ್ದು, ಉಳಿದಂತೆ ದೇವೇಂದ್ರ ಹಾಗೂ ಯೋಗೀಶ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸುಮಿತ್ ಅಂತಿಲ್ 68.55 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರೆ, ದೇವೇಂದ್ರ ಎಫ್ 46 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಡಿಸ್ಕಸ್ ಎಸೆತದಲ್ಲಿ ಯೋಗೀಶ್ ಕತುನಿಯಾ ಎಫ್ 56 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರ ಸಾಧನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ತಡರಾತ್ರಿ ಟೋಕಿಯೋದಿಂದ ಒಟ್ಟು 10 ಅಥ್ಲೀಟ್ಸ್ಗಳು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಇಲ್ಲಿಯವರೆಗೆ 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿ 10 ಪದಕ ಗೆದ್ದಿದೆ.
ಇದನ್ನೂ ಓದಿರಿ: ಗುಡ್ ನ್ಯೂಸ್... BBMP ವ್ಯಾಪ್ತಿಯಲ್ಲಿ ದಿನದ 12 ಗಂಟೆ ಲಸಿಕಾ ಕೇಂದ್ರ ಓಪನ್