ಕರ್ನಾಟಕ

karnataka

ETV Bharat / sports

Tokyo Paralympics: ಫೈನಲ್‌ಗೇರಿದ ಪ್ಯಾರಾ ಏರ್​ಪಿಸ್ತೂಲ್ ಪಟು ರುಬೀನಾ ಫ್ರಾನ್ಸಿಸ್​​ - ರುಬಿನಾ ಫ್ರಾನ್ಸಿಸ್ ಫೈನಲ್​ಗೆ ಲಗ್ಗೆ

ಪ್ಯಾರಾಲಿಂಪಿಕ್ಸ್​ 10 ಮೀಟರ್​ ಏರ್​ ಪಿಸ್ತೂಲ್ ಎಸ್​​ಹೆಚ್​​​1 ವಿಭಾಗದಲ್ಲಿ ಭಾರತದ ರುಬೀನಾ ಫ್ರಾನ್ಸಿಸ್ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

Tokyo Paralympics: India's Rubina Francis qualifies for 10m Air Pistol SH1 final
Tokyo Paralympics: ಫೈನಲ್​ಗೆ ಪ್ಯಾರಾ ಏರ್​ಪಿಸ್ತೂಲ್ ಪಟು ರುಬೀನಾ ಫ್ರಾನ್ಸಿಸ್​​

By

Published : Aug 31, 2021, 10:35 AM IST

ಟೋಕಿಯೋ(ಜಪಾನ್):ಭಾರತೀಯ ಪ್ಯಾರಾ ಶೂಟರ್ ರುಬೀನಾ ಫ್ರಾನ್ಸಿಸ್ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 10 ಮೀಟರ್​ ಏರ್​ ಪಿಸ್ತೂಲ್ ಎಸ್​​ಹೆಚ್​​​1 ಮಹಿಳೆಯರ ವಿಭಾಗದಲ್ಲಿ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದ ರುಬೀನಾ 560 ಪಾಯಿಂಟ್​ಗಳೊಂದಿಗೆ ಪೂರ್ಣಗೊಳಿಸುವ ಮೂಲಕ 7 ಸ್ಥಾನ​ ಪಡೆಯುವ ಮೂಲಕ ಫೈನಲ್ ಪ್ರವೇಶ ಪಡೆದಿದ್ದಾರೆ. ಮೊದಲ ಸಿರೀಸ್​ನ ಅಂತ್ಯಕ್ಕೆ 91 ಪಾಯಿಂಟ್‌ಗಳಿಸಿದ್ದ ರುಬೀನಾ 19 ಸ್ಥಾನ ಪಡೆದಿದ್ದರು.

ನಂತರ 187 ಅಂಕ ಗಳಿಸಿ, 6ನೇ ಸ್ಥಾನ ಪಡೆದಿದ್ದ ಅವರು, ಮತ್ತೊಂದು ಸುತ್ತಿನಲ್ಲಿ 282 ಪಾಯಿಂಟ್ ಪಡೆಯುವುದರೊಂದಿಗೆ 3 ಸ್ಥಾನಕ್ಕೂ ಜಿಗಿದಿದ್ದರು. ಆದರೆ ಮುಂದಿನ ಸುತ್ತುಗಳಲ್ಲಿ 9.4 ಪಾಯಿಂಟ್​ಗಳಷ್ಟಿದ್ದ ಸರಾಸರಿ 9.35ಕ್ಕೆ ಇಳಿಕೆ ಕಂಡು ಕೊನೆಗೆ ಏಳನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ರುಬೀನಾ ಫ್ರಾನ್ಸಿನ್ ಈಗ ಫೈನಲ್ ಪ್ರವೇಶ ಪಡೆದಿದ್ದು, ಇಂದೇ ಫೈನಲ್ ಪಂದ್ಯ ನಡೆಯಲಿದೆ. ಈ ಸಿರೀಸ್​ನಲ್ಲಿ ರುಬೀನಾ ಪದಕ ಗೆಲುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್​ 'ಚಿನ್ನ' ಅವಿನ ಲೇಖಾರಾಗೆ ಆನಂದ್​ ಮಹೀಂದ್ರಾ ಭರ್ಜರಿ ಗಿಫ್ಟ್​

ABOUT THE AUTHOR

...view details