ಕರ್ನಾಟಕ

karnataka

ETV Bharat / sports

Tokyo Paralympics: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್​​ - ಬ್ರೆಜಿಲ್ ಆಟಗಾರ್ತಿಗೆ ಸೋಲು

ಗುರುವಾರ ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ಅವರನ್ನು ಸೋಲಿಸಿದ್ದ ಭಾವಿನಾ ಪಟೇಲ್ ಇಂದು ಬ್ರೆಜಿಲ್ ಆಟಗಾರ್ತಿಯನ್ನು ಮಣಿಸುವ ಮೂಲಕ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

tokyo-paralympics-indias-paddler-bhavina-patel-beats-joyce-de-oliveira
Tokyo Paralympics: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್​​

By

Published : Aug 27, 2021, 9:06 AM IST

ಟೋಕಿಯೋ(ಜಪಾನ್):ಭಾರತೀಯ ಪ್ಯಾರಾ ಟೇಬಲ್​ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್​ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದರು.

ಬ್ರೆಜಿಲ್​ನ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಜೋಯ್ಸ್​​ ಡಿ ಒಲಿವೈರಾ ಅವರೊಂದಿಗೆ 4 ಹಂತದ ಆಟವಾಡಿದ ಅವರು 3-0 ನೇರ ಸೆಟ್​​ಗಳಿಂದ ಮಣಿಸಿ, ಕ್ವಾರ್ಟರ್ ಫೈನಲ್​​ಗೆ ಅರ್ಹತೆ ಪಡೆದಿದ್ದಾರೆ.

ಪ್ಯಾರಾಲಿಂಪಿಕ್ಸ್​ ಟೇಬಲ್ ಟೆನ್ನಿಸ್ ಮಹಿಳಾ ಸಿಂಗಲ್ಸ್​ನಲ್ಲಿ ಇದು 16ನೇ ಪಂದ್ಯವಾಗಿದ್ದು, 12-10, 13-11, 11-6 ನೇರ ಸೆಟ್​ಗಳಿಂದ ಮುಂದಿನ ಹಂತಕ್ಕೆ ಭಾವಿನಾ ತಲುಪಿದ್ದು, ಪದಕ ಭರವಸೆ ಮೂಡಿಸಿದ್ದಾರೆ.

ಗುರುವಾರ 3-1 ಸೆಟ್​ಗಳ ಅಂತರದಲ್ಲಿ ಭಾವಿನಾ ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ಅವರನ್ನು ಸೋಲಿಸಿದ್ದರು. ಇದಕ್ಕೂ ಮೊದಲು ಅಂದರೆ ಬುಧವಾರ ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಭಾವಿನಾ ಸೋಲೊಪ್ಪಿಕೊಂಡಿದ್ದರು.

ಇದನ್ನೂ ಓದಿ:ಒಲಿಂಪಿಕ್ಸ್​ನಲ್ಲಿ ಪದಕ ಮಿಸ್ ಮಾಡಿಕೊಂಡ 24 ಕ್ರೀಡಾಪಟುಗಳಿಗೆ ಟಾಟಾ ಮೋಟರ್ಸ್​ನಿಂದ ಕಾರು ಗಿಫ್ಟ್

ABOUT THE AUTHOR

...view details