ಕರ್ನಾಟಕ

karnataka

ETV Bharat / sports

Tokyo Paralympics: ಆರ್ಚರಿಯಲ್ಲಿ ಮೊದಲ ಕಂಚಿನ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್ - South Korea's Min Su Kim

ಪ್ಯಾರಾಲಿಂಪಿಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಆರ್ಚರಿಪಟು ಹರ್ವಿಂದರ್ ಸಿಂಗ್ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ.

Tokyo Paralympics: ದೇಶಕ್ಕೆ ಆರ್ಚರಿಯಲ್ಲಿ ಮೊದಲ ಕಂಚಿನ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್
Tokyo Paralympics: ದೇಶಕ್ಕೆ ಮೊದಲ ಬಾರಿಗೆ ಕಂಚಿನ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್

By

Published : Sep 3, 2021, 6:37 PM IST

ಟೋಕಿಯೋ(ಜಪಾನ್):ಭಾರತೀಯ ಆರ್ಚರಿಪಟು ಹರ್ವಿಂದರ್ ಸಿಂಗ್ ಅವರು ಶುಕ್ರವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ವೈಯಕ್ತಿಕ ರಿಕರ್ವ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಇತಿಹಾಸ ಸೃಷ್ಟಿಸಿದರು.

ದಕ್ಷಿಣ ಕೊರಿಯಾದ ಮಿನ್ ಸು ಕಿಮ್ ಅವರನ್ನು 6-5 ಪಾಯಿಂಟ್​ಗಳ ಅಂತರದಿಂದ ಸೋಲಿಸಿದ ಹರ್ವಿಂದರ್ ಸಿಂಗ್, ಯುಮೆನೊಶಿಮಾ ಫೈನಲ್ ಫೀಲ್ಡ್​​ನಲ್ಲಿ ಭಾರತದ ಮೊದಲ ಬಿಲ್ಲುಗಾರಿಕಾ ವಿಭಾಗದ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಮೊದಲ ಸೆಟ್​ನಲ್ಲಿ 10,7,9 ಅಂಕಗಳನ್ನು ಹರ್ವಿಂದರ್ ಗಳಿಸಿದ್ದರು. ಇದೇ ವೇಳೆಯಲ್ಲಿ ದಕ್ಷಿಣ ಕೊರಿಯಾದ ಬಿಲ್ಲುಗಾರ 9, 6, 9 ಪಾಯಿಂಟ್​ಗಳನ್ನು ಗಳಿಸಿದ್ದರು. ಅಂದರೆ ಮೊದಲ ಸೆಟ್ ಮುಗಿಯುಷ್ಟರಲ್ಲಿ ಹರ್ವಿಂದರ್​ 26 ಅಂಕ ಮತ್ತು ಮಿನ್ ಸು ಕಿಮ್ 25 ಪಾಯಿಂಟ್ ಪಡೆದಿದ್ದರು.

ಎರಡನೇ ಸೆಟ್​​ನಲ್ಲಿ ಮಿನ್ ಸು ಕಿಮ್ 29 ಪಾಯಿಂಟ್ ಪಡೆದು, ಆಟದ ರೋಚಕತೆಯನ್ನು ಹೆಚ್ಚಿಸಿದರು. ಮೂರನೇ ಸೆಟ್​​ನಲ್ಲಿ ಹರ್ವಿಂದರ್ 28, ಮಿನ್ ಸು ಕಿಮ್ 25 ಪಾಯಿಂಟ್​ಗಳನ್ನು ಪಡೆದರು. ನಾಲ್ಕನೇ ಸೆಟ್​ ಕೂಡಾ ಇಬ್ಬರಲ್ಲೂ ಒಂದೇ ರೀತಿಯ ಅಂಕಗಳನ್ನು ತಂದುಕೊಟ್ಟಿತ್ತು.

ಇದರಿಂದಾಗಿ ಕೊನೆಯ ಅಂದರೆ ಐದನೇ ಸೆಟ್​ ನಿರ್ಣಾಯವಾಗಿತ್ತು. ಈಗ ಹರ್ವೀಂದರ್ 27 ಅಂಕಗಳನ್ನು, ಮಿನ್ ಸು ಕಿಮ್ 26 ಅಂಕಗಳನ್ನು ಪಡೆದುಕೊಳ್ಳುವ ಮೂಲಕ, ಕಂಚಿನ ಪದಕವನ್ನು ಭಾರತೀಯ ಆಟಗಾರ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ:ಎದುರಾಳಿ ನೀಡಿದ ಬಲವಾದ ಪಂಚ್​ಗೆ ಮಹಿಳಾ ಬಾಕ್ಸರ್ ಸಾವು

ABOUT THE AUTHOR

...view details