ಕರ್ನಾಟಕ

karnataka

ETV Bharat / sports

Paralympics: ಭಾರತಕ್ಕೆ 12ನೇ ಪದಕ.. ಶೂಟಿಂಗ್​ನಲ್ಲಿ ಚಿನ್ನದ ಬಳಿಕ ಕಂಚಿನ ಪದಕ ಗೆದ್ದ ಅವನಿ ಲೇಖರಾ - ಅವನಿ ಲೇಖಾರಾ

1983ರಲ್ಲಿ ಜಿತೆಂದರ್ ಸಿಂಗ್ ಸೋಡಿ ಹಲವು ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿದ್ದರು, ಇದು ವೈಯಕ್ತಿಕವಾಗಿ ಒಬ್ಬರೇ ಪಡೆದ ಹೆಚ್ಚು ಪದಕವಾಗಿತ್ತು. ಇದೀಗ ಮಹಿಳೆಯರ ವಿಭಾಗದಲ್ಲಿ ಅವನಿ ಎರಡು ಪದಕ ಗೆದ್ದಿದ್ದಾರೆ.

tokyo-paralympics-avani-lekhara-won-bronze-in-women-shooting-50m-rifle-3-position
ಶೂಟಿಂಗ್​ನಲ್ಲಿ ಚಿನ್ನದ ಬಳಿಕ ಕಂಚಿನ ಪದಕ ಗೆದ್ದ ಅವನಿ ಲೇಖಾರಾ

By

Published : Sep 3, 2021, 12:22 PM IST

ಟೋಕಿಯೋ (ಜಪಾನ್):ಟೋಕಿಯೋ ಪ್ಯಾರಾಲಿಂಪಿಕ್​​ನಲ್ಲಿ ಭಾರತದ ಪದಕ ಓಟ ಮುಂದುವರಿದಿದೆ. ಇದೀಗ ಮಹಿಳಾ ವಿಭಾಗದ 50 ಮೀಟರ್ ರೈಫಲ್ ವಿಭಾಗದಲ್ಲಿ ಅವನಿ ಲೇಖರಾ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್​ನಲ್ಲಿ ತನ್ನ 12ನೇ ಪದಕ ಗೆದ್ದುಕೊಂಡಂತಾಗಿದೆ.

ಜೊತೆಗೆ ಪಾರಾಲಿಂಪಿಕ್​ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಅವನಿ ಲೇಖರಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 10 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದರು. ಇದೀಗ 50 ಮೀಟರ್​ ಶೂಟಿಂಗ್​​​ನಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದಾರೆ.

1983ರಲ್ಲಿ ಜಿತೆಂದರ್ ಸಿಂಗ್ ಸೋಡಿ ಹಲವು ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿದ್ದರು, ಇದು ವೈಯಕ್ತಿಕವಾಗಿ ಓರ್ವ ಪಡೆದ ಹೆಚ್ಚು ಪದಕವಾಗಿತ್ತು. ಇದೀಗ ಮಹಿಳೆಯರ ವಿಭಾಗದಲ್ಲಿ ಅವನಿ ಎರಡು ಪದಕ ಗೆದ್ದಿದ್ದಾರೆ.

ಸ್ಪರ್ಧೆಯಲ್ಲಿ 457.9 ಅಂಕ ಪಡೆದ ಚೀನಾದ ಕುಲ್ಪಿಂಗ್ ಜಾಂಗ್ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, 445.9 ಅಂಕಗಳೊಂದಿಗೆ ಅವನಿ ಕಂಚು ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ:ಚಿನ್ನದ ಅವನಿ'ಗೆ 3 ಕೋಟಿ ರೂ., ದೇವೇಂದ್ರ ಜಜಾರಿಯಾಗೆ 2 ಕೋಟಿ ರೂ. ಘೋಷಿಸಿದ ರಾಜಸ್ಥಾನ್ ಸರ್ಕಾರ

ABOUT THE AUTHOR

...view details