ETV Bharat Karnataka

ಕರ್ನಾಟಕ

karnataka

ETV Bharat / sports

Tokyo Olympics: ಬಜರಂಗ್​ ಪುನಿಯಾ ಸೆಮಿಫೈನಲ್‌ ಪ್ರವೇಶ: ಕುಸ್ತಿಯಲ್ಲಿ ಮತ್ತೊಂದು ಪದಕ ನಿರೀಕ್ಷೆ - ಕ್ವಾಟರ್​​ ಫೈನಲ್​​ ಪ್ರವೇಶಿಸಿದ ಬಜರಂಗ್​ ಪುನಿಯಾ

ಭಾರತೀಯ ಭರವಸೆಯ ರೆಸ್ಲರ್ ಬಜರಂಗ್​ ಪುನಿಯಾ ಸೆಮಿಪೈನಲ್‌ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

ಬಜರಂಗ್​ ಪುನಿಯಾ
ಬಜರಂಗ್​ ಪುನಿಯಾ
author img

By

Published : Aug 6, 2021, 9:31 AM IST

Updated : Aug 6, 2021, 10:07 AM IST

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಇರಾನ್‌ ಸ್ಪರ್ಧಿ ಮೊರ್ತೆಜಾ ಘಿಯಾಸಿ ಚೆಕಾ (Morteza Ghiasi Cheka)ಅವರನ್ನು 2-1 ರಿಂದ ಸೋಲಿಸಿ ಸೆಮಿಫೈನಲ್​​ ಪ್ರವೇಶಿಸಿದರು.

ಇಂದು ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವಾಡಿದ ಬಜರಂಗ್​ ಪುನಿಯಾ, ಮೊದಲ ರೌಂಡ್​​ನಲ್ಲಿ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ರೌಂಡ್​ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಬಜರಂಗ್,​ ಅಂತಿಮವಾಗಿ 2-1 ಅಂತರದಿಂದ ಗೆಲವು ಸಾಧಿಸಿ ಸೆಮಿಫೈನಲ್​​ ಪ್ರವೇಶಿಸಿದರು.‌ ಸೆಮಿಫೈನಲ್​ನಲ್ಲಿ ಅಜೆರ್ಬೈಜಾನ್​ನ ಹಾಜಿ ಅಲಿಯೇವ್ (Haji Aliyev of Azerbaijan) ವಿರುದ್ಧ ಸೆಣಸಾಡಲಿದ್ದಾರೆ.

Last Updated : Aug 6, 2021, 10:07 AM IST

ABOUT THE AUTHOR

...view details