ಟೋಕಿಯೊ (ಜಪಾನ್):ಮಹಿಳೆಯರ 1,500 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಯುಎಸ್ನ ಕೇಟೀ ಲೆಡೆಕಿ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಕೇವಲ 15:37.34 ಸೆಕೆಂಡ್ನಲ್ಲಿ ಮುಗಿಸಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಇವರ ನಂತರದ ಸ್ಥಾನದಲ್ಲಿ ಜರ್ಮನಿಯ ಎರಿಕಾ ಸುಲ್ಲಿವಾನ್ ಮತ್ತು ಜರ್ಮನಿಯ ಸಾರಾ ಕೊಹ್ಲರ್ ಇದ್ದರು. ಶ್ರೇಷ್ಠ ಮಹಿಳಾ ಈಜುಗಾರ್ತಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಕೇಟೀ ಈಗ 6 ಒಲಿಂಪಿಕ್ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ 15 ಚಿನ್ನದ ಪದಕ ಗೆದ್ದಿದ್ದಾರೆ. ಇದು ಮಹಿಳಾ ಈಜುಗಾರರ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಪಡೆದ ಕ್ರೀಡಾಪಟು ಎನಿಸಿದ್ದಾರೆ.