ಟೋಕಿಯೋ, ಜಪಾನ್:ಭಾರತೀಯ ಬಹುನಿರೀಕ್ಷಿತ ಶಟ್ಲರ್ ಸಾಯಿ ಪ್ರಣೀತ್ ಟೋಕಿಯೋ ಒಲಿಂಪಿಕ್ನ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಇಸ್ರೇಲ್ನ ಮಿಶಾ ಜಿಲ್ಬರ್ಮನ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಟೋಕಿಯೋ ಕ್ರೀಡಾಗ್ರಾಮದ ಮುಸಾಶಿನೋ ಫಾರೆಸ್ಟ್ ಪ್ಲಾಜಾ ಕೋರ್ಟ್ನಲ್ಲಿ 2ರಲ್ಲಿ ನಡೆದ ಗ್ರೂಪ್ ಡಿ ಪಂದ್ಯದಲ್ಲಿ ಜಿಲ್ಬರ್ಮನ್ ಪ್ರಣೀತ್ ಅವರನ್ನು 21-17, 21-15 ಸೆಟ್ಗಳಿಂದ ಸೋಲಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಅತ್ಯಂತ ಕಡಿಮೆ ಅಂದರೆ 3 ಪಾಯಿಂಟ್ಗಳ ಅಂತರದಲ್ಲಿ ಪ್ರಣೀತ್ ಸೋಲು ಅನುಭವಿಸಿದ್ದು, ಎರಡನೇ ಸುತ್ತಿನಲ್ಲಿ ಸುಮಾರು 6 ಪಾಯಿಂಟ್ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಈ ದಿನದ ಅಂತ್ಯದೊಳಗೆ ಪುರುಷರ ಶಟ್ಲರ್ನ ಡಬಲ್ಸ್ನಲ್ಲಿ ಸ್ವಸ್ತಿಕ್ ಸಾಯಿ ರಾಜ್, ಚಿರಾಗ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.