ಕರ್ನಾಟಕ

karnataka

ETV Bharat / sports

Tokyo Olympics Wrestling: ಸೆಮಿಫೈನಲ್​ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ ದಹಿಯಾ - Tokyo Olympics wrestling

ಭಾರತದ ಭರವಸೆಯ ಕುಸ್ತಿಪಟು ರವಿ ಕುಮಾರ್ ದಹಿಯಾ ಬಲ್ಗೇರಿಯಾದ ಸ್ಪರ್ಧಿಯನ್ನು ಸೋಲಿಸಿ ಸೆಮಿಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

Tokyo Olympics: Ravi Dahiya beats Colombia's Tigreros Urbano
ಟೋಕಿಯೋ ಒಲಿಂಪಿಕ್​ ಕುಸ್ತಿ: ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟ ರವಿ ದಹಿಯಾ

By

Published : Aug 4, 2021, 9:01 AM IST

Updated : Aug 4, 2021, 11:12 AM IST

ಟೋಕಿಯೋ(ಜಪಾನ್)​:2019ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದಿದ್ದ ರವಿ ಕುಮಾರ್ ದಹಿಯಾ ಟೋಕಿಯೋ ಒಲಿಂಪಿಕ್​ನ ಕುಸ್ತಿಪಂದ್ಯದಲ್ಲಿ ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

57 ಕೆ.ಜಿ ವಿಭಾಗದ ಪುರುಷರ ಪ್ರೀಸ್ಟೈಲ್ ಕುಸ್ತಿ ವಿಭಾಗದ ಕ್ವಾರ್ಟರ್​ ಫೈನಲ್​ನಲ್ಲಿ ದಹಿಯಾ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಮಣಿಸಿದ್ದಾರೆ. ಇದಕ್ಕೂ ಮೊದಲು ಕೊಲಂಬಿಯಾದ ಟೈಗ್ರೇರೋಸ್​ ಉರ್ಬಾನೋ ಅವರನ್ನು ಸೋಲಿಸಿ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದಿದ್ದರು.

ಸೆಮಿಫೈನಲ್​ನಲ್ಲಿ ಕಜಕಿಸ್ತಾನದ ನೂರಿಸ್ಲಮ್ ಸನಾಯೆವ್ ಅವರನ್ನು ಇಂದೇ ಎದುರಿಸಲಿದ್ದಾರೆ. ಈ ಮೂಲಕ ರವಿ ದಹಿಯಾ ಪದಕ ಗೆಲ್ಲುವ ಭರವಸೆಯ ಕಿರಣವಾಗಿದ್ದಾರೆ.

ಇದನ್ನೂ ಓದಿ:ಮಹಿಳಾ ಹಾಕಿ ತಂಡಕ್ಕೆ ಸೂರತ್‌ ವಜ್ರೋದ್ಯಮಿಯಿಂದ ವಿಶೇಷ ಬಹುಮಾನ ಘೋಷಣೆ

Last Updated : Aug 4, 2021, 11:12 AM IST

ABOUT THE AUTHOR

...view details