ಟೋಕಿಯೋ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದಾರೆ. ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ತಾರೆ ತೈ ಜು ಯಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ 18-21 ಹಾಗೂ 12-21 ಸೆಟ್ಗಳ ಅಂತರದಿಂದ ನಿರಾಸೆ ಅನುಭವಿಸಿದರು. ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಸೆಮಿಫೈನಲ್ನಲ್ಲಿ ಸೋಲುಂಡ ಬ್ಯಾಡ್ಮಿಂಟನ್ ತಾರೆ ಸಿಂಧು.. ಕಂಚಿನ ಪದಕಕ್ಕಾಗಿ ನಾಳೆ ಹೋರಾಟ - ಬ್ಯಾಡ್ಮಿಂಡನ್ ಸಿಂಧು
ಟೋಕಿಯೋ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು ಸೋಲು ಕಂಡಿದ್ದಾರೆ. ಆದರೆ ನಾಳೆ ಕಂಚಿನ ಪದಕಕ್ಕಾಗಿ ಚೀನಾ ಆಟಗಾರ್ತಿ ವಿರುದ್ಧ ಇನ್ನೊಂದು ಪಂದ್ಯ ನಡೆಯಲಿದೆ.
ಇಂದಿನ ಸೆಮಿಫೈನಲ್ ಸೋಲಿನಿಂದ ಸಿಂಧು ಚಿನ್ನದ ಪದಕ ಗೆಲುವ ಕನಸು ಭಗ್ನಗೊಂಡಿದ್ದು, ಫೈನಲ್ ರೇಸ್ನಿಂದ ಹೊರಬಿದ್ದಿದ್ದಾರೆ.ಈ ಹಿಂದೆ ಜಪಾನ್ನ ಅಕಾನೆ ಯಮಗುಚಿ ವಿರುದ್ಧ 21-13, 22-20 ಅಂತರದಿಂದ ಗೆಲುವು ದಾಖಲು ಮಾಡಿ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದ ಬ್ಯಾಡ್ಮಿಂಟನ್ ತಾರೆ ಸಿಂಧು ಸೆಮೀಸ್ನಲ್ಲಿ ವೈಫಲ್ಯ ಅನುಭವಿಸಿದರು. ಮೊದಲೆರೆಡು ಸೆಟ್ಗಳಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ.
ಈ ಹಿಂದೆ ಪಿ.ವಿ. ಸಿಂಧು ಹಾಗೂ ತೈ ಜು ಯಿಂಗ್ 18 ಬಾರಿ ಮುಖಾಮುಖಿಯಾಗಿದ್ದು,, ಇದರಲ್ಲಿ ತೈ ಜು ಯಿಂಗ್ 13 ಪಂದ್ಯಗಳನ್ನು ಗೆದ್ದಿದ್ದರೆ, ಸಿಂಧು ಕೇವಲ 5 ಗೆಲುವು ದಾಖಲಿಸಿದ್ದಾರೆ.