ಕರ್ನಾಟಕ

karnataka

ETV Bharat / sports

ಟೋಕಿಯೋದಲ್ಲಿ ಇತಿಹಾಸ ಬರೆದ ಚೋಪ್ರಾ.. ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಮುಕುಟ - ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಡುವಲ್ಲಿ ನೀರಜ್​ ಚೋಪ್ರಾ ಯಶಸ್ವಿಯಾಗಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

Neeraj Chopra
Neeraj Chopra

By

Published : Aug 7, 2021, 5:39 PM IST

Updated : Aug 7, 2021, 6:35 PM IST

ಟೋಕಿಯೋ: ಜಾವಲಿನ್ ಥ್ರೋನಲ್ಲಿ ಭಾರತದ ನೀರಜ್​ ಚೋಪ್ರಾ ಇತಿಹಾಸ ರಚನೆ ಮಾಡಿದ್ದಾರೆ. 120 ವರ್ಷಗಳ ಬಳಿಕ ಭಾರತಕ್ಕೆ ಅಥ್ಲೀಟ್ಸ್​ನಲ್ಲಿ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಒಲಿಂಪಿಕ್ಸ್​​ನಲ್ಲಿ ಸ್ವತಂತ್ರ ಭಾರತಕ್ಕೆ ಸಿಕ್ಕಿರುವ ಮೊದಲ ಅಥ್ಲೀಟ್ಸ್ ಪದಕ ಇದಾಗಿದೆ. 1900 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ(ಬ್ರಿಟಿಷ್​) ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚಾರ್ಡ್ 200 ಮೀ ಹರ್ಡಲ್ಸ್ ಮತ್ತು 200 ಸ್ಪ್ರಿಂಟ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದರು.

23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರು. ಆದರೆ ಮೂರನೇ ಪ್ರಯತ್ನ 76.79 ಮೀ.ಗಿಂತ ಕಡಿಮೆ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತಲೂ ಹೆಚ್ಚು ದೂರ ಬರ್ಚಿಯನ್ನು ಏಸೆದಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಜರ್ಮನಿಯ ಜೂಲಿಯನ್ ವೇಬರ್ 85.30 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು.ಇನ್ನು ವಿಶ್ವ ನಂ.1 ಜಾವಲಿನ್ ಥ್ರೋ ಪಟು ಜೊಹಾನಸ್‌ ವೆಟ್ಟರ್ ಅಂತಿಮ 8ರ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಕೂಡ ವಿಫಲರಾದರು. ವೈಯುಕ್ತಿಕ 96.29 ಮೀಟರ್ ದೂರ ಎಸೆಯುವ ಮೂಲಕ ಗಮನ ಸೆಳೆದಿದ್ದ ವೆಟ್ಟರ್ ಈ ಬಾರಿ ಪದಕ ಗೆಲ್ಲಬಲ್ಲ ನೆಚ್ಚಿನ ಜಾವಲಿನ್ ಪಟು ಎನಿಸಿದ್ದರು. ಆದರೆ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿ ನಿರಾಸೆ ಅನುಭವಿಸಿದರು.

ಜಪಾನ್​​ನ ಟೋಕಿಯೋದಲ್ಲಿ 23 ವರ್ಷದ ನೀರಜ್​ ಚೋಪ್ರಾ 87.58 ಮೀಟರ್ ದೂರ ಎಸೆದು, ದಿಗ್ಗಜರನ್ನೇ ಮೀರಿಸಿದ್ದು, ಈ ಮೂಲಕ ಹೊಸ ರೆಕಾರ್ಡ್​ ಬರೆದಿದ್ದಾರೆ. ಅಥ್ಲೀಟ್ಸ್​ನಲ್ಲಿ ಭಾರತಕ್ಕೆ ಬಂದಿರುವ ಎರಡನೇ ಪದಕ ಇದ್ದಾಗಿದ್ದು, ಈ ಹಿಂದೆ 1900ರಲ್ಲಿ ಭಾರತದ ಪರವಾಗಿ ನೊರ್ಮನ್​ ಪ್ರಿಚಾರ್ಡ್​ 200 ಮೀಟರ್​ ಹರ್ಡಲ್ಸ್​ನಲ್ಲಿ ಭಾರತಕ್ಕೆ ಎರಡು ಬೆಳ್ಳಿ ಗೆದ್ದಿದ್ದರು.

ಆದರೆ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್​ ವಿಭಾಗದಲ್ಲಿ 120 ವರ್ಷದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ ನೀರಜ್​ ಚೋಪ್ರಾ. ಈ ಹಿಂದೆ 88.07 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ದಾಖಲೆ ಬರೆದಿದ್ದರು. 2018ರ ಏಷ್ಯನ್ ಗೇಮ್ಸ್​ನಲ್ಲಿ ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು.

Last Updated : Aug 7, 2021, 6:35 PM IST

ABOUT THE AUTHOR

...view details