ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​​​ ಫೈನಲ್​ನಲ್ಲಿ ನಿರಾಸೆ: ರಾಜ್ಯದ ಫೌವಾದ್​​ಗೆ 23ನೇ ಸ್ಥಾನ, 6ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಮಲ್​ಪ್ರೀತ್ ಕೌರ್​​ - ಡಿಸ್ಕಸ್​ ಥ್ರೋ ಕೌರ್​

ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಭರವಸೆ ಮೂಡಿಸಿದ್ದ ಭಾರತದ ಭರವಸೆಯ ಡಿಸ್ಕಸ್ ಥ್ರೋ ಆಟಗಾರ್ತಿ ಫೈನಲ್​ನಲ್ಲಿ ನಿರಾಸೆಗೊಳಗಾಗಿದ್ದು, 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Kamalpreet Kaur
Kamalpreet Kaur

By

Published : Aug 2, 2021, 6:55 PM IST

Updated : Aug 2, 2021, 7:12 PM IST

ಟೋಕಿಯೋ: ಒಲಿಂಪಿಕ್ಸ್​​ನ ಮಹಿಳೆಯರ ಚಕ್ರ ಎಸೆತ(ಡಿಸ್ಕಸ್ ಥ್ರೋ) ಪಂದ್ಯದಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ನಿರಾಸೆ ಮೂಡಿಸಿದ್ದು, ಫೈನಲ್​ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಪದಕ ವಂಚಿತರಾಗಿದ್ದಾರೆ. ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದ ಸಂದರ್ಭದಲ್ಲಿ 64.00 ಮೀಟರ್ ದೂರದವರೆಗೆ ಡಿಸ್ಕಸ್ ಥ್ರೋ ಮಾಡುವ ಮೂಲಕ ಅಂತಿಮ ಸುತ್ತು ಪ್ರವೇಶಿಸಿದ್ದ ಅವರು ಇದೀಗ 63.70 ದೂರ ಎಸೆಯುವ ಮೂಲಕ 6ನೇ ಸ್ಥಾನದಲ್ಲಿ ಉಳಿದುಕೊಂಡರು.

ಈ ಕ್ರೀಡೆಯಲ್ಲಿ ಅಮೆರಿಕದ ವ್ಯಾಲರಿ ಆಲ್ಮನ್​​ 68.98 ಮೀಟರ್ ದೂರ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದು, ಜರ್ಮನಿಯ ಕ್ರಿಸ್ಟಿನ್ ಪುಡೆಂಜ್​​ 66.86 ಮೀಟರ್​ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಹಾಗೂ ಕ್ಯೂಬಾದ ಯೈಮ್ ಪೆರೆಜ್ 65.72 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದಾರೆ.

ಈಕ್ವೆಸ್ಟ್ರಿಯನ್‌ ಫೈನಲ್​ನಲ್ಲಿ ಫೌವಾದ್ ಮಿರ್ಜಾ, ಸೀಗ್ನೂರ್ ಮೆಡಿಕಾಟ್​ಗೆ ಸೋಲು

ಈಕ್ವೆಸ್ಟ್ರಿಯನ್‌ನಲ್ಲಿ (ಕುದುರೆ ಸವಾರಿ) ಫೈನಲ್​ ಪ್ರವೇಶಿಸಿದ ಕರ್ನಾಟಕದ ಫೌವಾದ್ ಮಿರ್ಜಾ ಹಾಗೂ ಸೀಗ್ನೂರ್ ಮೆಡಿಕಾಟ್ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಮೂಲಕ ನಿರಾಸೆಗೊಳಗಾಗಿದ್ದಾರೆ. ಕುದುರೆ ಸವಾರಿ ಸಿಂಗಲ್ಸ್​ನಲ್ಲಿ 8 ಪೆನಾಲ್ಟಿ ಅಂಕ ಪಡೆದುಕೊಳ್ಳುವ ಮೂಲಕ 47.20 ಸ್ಕೋರ್​ ಗಳಿಸಿ ಈ ಅರ್ಹತೆ ಪಡೆದುಕೊಂಡಿದ್ದರು.

Last Updated : Aug 2, 2021, 7:12 PM IST

ABOUT THE AUTHOR

...view details