ಕರ್ನಾಟಕ

karnataka

ETV Bharat / sports

Tokyo Olympics Hockey: ಜಪಾನ್​ ವಿರುದ್ಧ ಭಾರತೀಯ ಪುರುಷರ ತಂಡಕ್ಕೆ ಭರ್ಜರಿ ಗೆಲುವು

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಪುರುಷರ ಹಾಕಿ ತಂಡ ಇಂದಿನ ಪಂದ್ಯದಲ್ಲಿ ಮತ್ತೊಂದು ಗೆಲುವು ದಾಖಲು ಮಾಡಿದೆ.

India men's hockey team
India men's hockey team

By

Published : Jul 30, 2021, 5:30 PM IST

ಟೋಕಿಯೋ:ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿರುವ ಭಾರತದ ಪುರುಷರ ಹಾಕಿ ತಂಡ ಜಪಾನ್​ ವಿರುದ್ಧದ ಇಂದಿನ ಪಂದ್ಯದಲ್ಲೂ ಗೆಲುವು ದಾಖಲು ಮಾಡಿದೆ.

ಗ್ರೂಪ್​ A ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಜಪಾನ್​ ವಿರುದ್ಧ 5-3 ಗೋಲುಗಳ ಅಂತರದಿಂದ ಜಯ ಸಾಧಿಸುವ ಮೂಲಕ ನಾಲ್ಕನೇ ತಂಡವಾಗಿ ಕ್ವಾರ್ಟರ್​ ಫೈನಲ್​ಗೆ ಹಾಕಿದ್ದು, ಸತತವಾಗಿ ಮೂರು ಪಂದ್ಯ ಗೆದ್ದಿರುವ ದಾಖಲೆಗೆ ಪಾತ್ರವಾಗಿದೆ.

ಗ್ರೂಪ್​ A ತಂಡಗಳ ಪೈಕಿ ಆಸ್ಟ್ರೇಲಿಯಾ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆದ್ದು ಮೊದಲನೇ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಅರ್ಜೆಂಟೈನಾ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿತ್ತು.

ನ್ಯೂಜಿಲ್ಯಾಂಡ್​ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿ ಗೆಲುವು ಸಾಧಿಸಿದ್ದ ಭಾರತ ತದನಂತರ ಆಸ್ಟ್ರೇಲಿಯಾ ವಿರುದ್ಧ 7-1 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿತ್ತು. ಇದಾದ ಬಳಿಕ ತಾನು ಆಡಿರುವ ಎಲ್ಲ ಪಂದ್ಯಗಳಲ್ಲೂ ಮನಪ್ರೀತ್​ ಸಿಂಗ್​ ಬಳಗ ಗೆಲುವು ಸಾಧಿಸಿದೆ.

ಇದನ್ನೂ ಓದಿ: 'ಗೋಲ್ಡನ್​​ ಸ್ಲ್ಯಾಮ್'​​ ಕನಸು ಭಗ್ನ: ಸೆಮಿಫೈನಲ್​ನಲ್ಲಿ ಜೊಕೊವಿಚ್‌ಗೆ ಅಚ್ಚರಿಯ ಸೋಲು

ಹಾಕಿಯಲ್ಲಿ 8 ಬಂಗಾರದ ಪದಕ ಗೆದ್ದಿರುವ ಭಾರತ 1980ರ ಮಾಸ್ಕೋ ಒಲಿಂಪಿಕ್ಸ್​ ಬಳಿಕ ಯಾವುದೇ ಪದಕ ಗೆದ್ದಿಲ್ಲ. ಇನ್ನು 2016ರ ಒಲಿಂಪಿಕ್ಸ್​ನಲ್ಲಿ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದ್ದ ಭಾರತ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ಗ್ರೂಪ್​ ಹಂತದ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್​, ಸ್ಪೇನ್​, ಅರ್ಜೆಂಟೈನಾ ಹಾಗೂ ಜಪಾನ್​ ವಿರುದ್ಧ ಗೆಲುವು ದಾಖಲು ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋಲು ಕಂಡಿದೆ.

ABOUT THE AUTHOR

...view details