ಕರ್ನಾಟಕ

karnataka

ETV Bharat / sports

Tokyo Olympics Wrestling: ಕುಸ್ತಿಯಲ್ಲಿ ಸೆಮಿ ಫೈನಲ್​ಗೇರಿದ ದೀಪಕ್ ಪೂನಿಯಾ - ಕುಸ್ತಿಪಟು ರವಿ ಕುಮಾರ್​​ ದಹಿಯಾ

86 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಚೀನಾದ ಲಿನ್ ಜುಶೆನ್ ಅವರನ್ನು ಸೋಲಿಸಿದ ಪೂನಿಯಾ ಸೆಮಿಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

Tokyo Olympics Wrestling: ರವಿ ದಹಿಯಾ ನಂತರ ಸೆಮಿ ಫೈನಲ್​ಗೇರಿದ ದೀಪಕ್ ಪೂನಿಯಾ
Tokyo Olympics Wrestling: ರವಿ ದಹಿಯಾ ನಂತರ ಸೆಮಿ ಫೈನಲ್​ಗೇರಿದ ದೀಪಕ್ ಪೂನಿಯಾ

By

Published : Aug 4, 2021, 9:42 AM IST

Updated : Aug 4, 2021, 10:03 AM IST

ಟೋಕಿಯೋ(ಜಪಾನ್):ರವಿ ಕುಮಾರ್​​ ದಹಿಯಾ ನಂತರ ಮತ್ತೊಬ್ಬ ಕುಸ್ತಿಪಟು ದೀಪಕ್​ ಪೂನಿಯಾ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿ​ ಫೈನಲ್​ ಪ್ರವೇಶಿಸಿದ್ದು, ಈಗ ಇಬ್ಬರು ಕುಸ್ತಿಪಟುಗಳು ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದಾರೆ.

86 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಚೀನಾದ ಲಿನ್ ಜುಶೆನ್ ಅವರನ್ನು 6-3 ಅಂಕಗಳಿಂದ ಸೋಲಿಸಿದ ಪೂನಿಯಾ ಸೆಮಿಫೈನಲ್​ಗೆ ಅರ್ಹತೆ ಪಡೆದಿದ್ದಾರೆ. ಇದಕ್ಕೂ ಮೊದಲು ನೈಜೀರಿಯಾದ ಎಕೆರೆಕೆಮೆ ಅಜಿಯೋಮೋರ್​ ಅವರನ್ನು ಸೋಲಿಸಿ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದಿದ್ದರು. ಎಕೆರೆಕೆಮೆ ಅಜಿಯೋಮೋರ್​, ಆಫ್ರಿಕಾದ ಮಾಜಿ ಚಾಂಪಿಯನ್​ ಆಗಿದ್ದಾರೆ.

ಸೆಮಿಫೈನಲ್ ಪಂದ್ಯ ಕೂಡಾ ಇಂದೇ ನಡೆಯಲಿದೆ. ಅಮೆರಿಕದ ಡೇವಿಡ್ ಟೇಲರ್ ಅವರನ್ನು ದೀಪಕ್ ಪೂನಿಯಾ ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದ ರವಿ ಕುಮಾರ್ ದಹಿಯಾ 57 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಬಲ್ಗೇರಿಯಾ ಸ್ಪರ್ಧಿಯನ್ನು ಸೋಲಿಸಿ ಸೆಮಿ​ಫೈನಲ್​ಗೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ:ಟೋಕಿಯೋ ಒಲಿಂಪಿಕ್ಸ್‌​ ಕುಸ್ತಿ: ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟ ರವಿ ದಹಿಯಾ

Last Updated : Aug 4, 2021, 10:03 AM IST

ABOUT THE AUTHOR

...view details