ಟೋಕಿಯೋ: ಒಲಿಂಪಿಕ್ಸ್ನಲ್ಲಿ ಇಂದು ಭಾರತೀಯ ಕ್ರೀಡಾಪಟುಗಳು ಅನೇಕ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ಆದರೆ ಸ್ಪೇನ್ ವಿರುದ್ಧ ನಡೆದ ಹಾಕಿಯಲ್ಲಿ ಭಾರತದ ಪುರುಷರ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ನಾಳೆ ಪ್ರಮುಖವಾಗಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಎರಡನೇ ಪಂದ್ಯದಲ್ಲಿ ಹಾಂಕಾಂಗ್ ಆಟಗಾರ್ತಿ ವಿರುದ್ಧ ಸೆಣಸಲಿದ್ದಾರೆ.
ಭಾರತ ನಾಳೆ ಈ ಸ್ಪರ್ಧೆಗಳಲ್ಲಿ ಮುಖಾಮುಖಿ:
ಹಾಕಿ(ಮಹಿಳಾ ತಂಡ)
ಬೆಳಗ್ಗೆ 6:30ಕ್ಕೆ ಭಾರತ-ಗ್ರೇಟ್ ಬ್ರಿಟನ್ ನಡುವೆ ಫೈಟ್ (ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ)
ಬ್ಯಾಡ್ಮಿಂಟನ್
ಬೆಳಗ್ಗೆ 7:30ಕ್ಕೆ: ಸಿಂಗಲ್ಸ್ನಲ್ಲಿ ಪಿ.ವಿ ಸಿಂಧು ಹಾಗೂ ಹಾಂಕಾಂಗ್ ಆಟಗಾರ್ತಿ ನಡುವೆ ಹಣಾಹಣಿ (ಮೊದಲ ಪಂದ್ಯ ಗೆದ್ದಿರುವ ಸಿಂಧು)
ಮಧ್ಯಾಹ್ನ 2:30ಕ್ಕೆ: ಸಿಂಗಲ್ಸ್ನಲ್ಲಿ ಸಾಯಿ ಪ್ರಣೀತ್ vs ನೆದರ್ಲ್ಯಾಂಡ್ನ ಮಾರ್ಕ್ ಸೆಣಸು