ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಿಂಪಿಕ್ಸ್‌ 6ನೇ ದಿನ: ದೀಪಿಕಾ, ಪೂಜಾ ರಾಣಿ, ಸಿಂಧುಗೆ ಗೆಲುವು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಗೆಲುವಿನ ಶುಭಾರಂಭ ಮಾಡಿದ್ದಾರೆ.

Tokyo Olympics, Day 6: Deepika Kumari beats Karma of Bhutan in women's individual 1/32 eliminations round
ಟೋಕಿಯೋ ಒಲಿಂಪಿಕ್ಸ್‌ 6ನೇ ದಿನ: ದೀಪಿಕಾ, ಪೂಜಾ ರಾಣಿ, ಸಿಂಧುಗೆ ಗೆಲುವು

By

Published : Jul 28, 2021, 3:39 PM IST

Updated : Jul 28, 2021, 3:56 PM IST

ಟೋಕಿಯೋ: ಭಾರತದ ಬಾಕ್ಸರ್ ಪೂಜಾ ರಾಣಿ 16ನೇ ಸುತ್ತಿನ ಪಂದ್ಯದಲ್ಲಿ ಅಲ್ಜೀರಿಯಾದ ಇಚ್ರಾಕ್ ಚೈಬ್ ವಿರುದ್ಧ 5-0 ಪಾಯಿಂಟುಗಳಿಂದ ಜಯಗಳಿಸಿದ್ದಾರೆ. ಮಹಿಳೆಯರ ಮಿಡಲ್ (69-75 ಕೆ.ಜಿ) ವಿಭಾಗದಲ್ಲಿ ಅವರು ಕೊನೇಯ 8ರಲ್ಲಿ ಸ್ಥಾನ ಪಡೆದಿದ್ದಾರೆ.

ಆರ್ಚರಿ- ದೀಪಿಕಾಗೆ ಗೆಲುವು

ದೀಪಿಕಾ

ಯುಮೆನೋಶಿಮಾ ಮೈದಾನದಲ್ಲಿ ನಡೆದ ಆರ್ಚರಿಯ ಮಹಿಳೆಯರ ವೈಯಕ್ತಿಕ 1/32 ಎಲಿಮಿನೇಷನ್ ಸುತ್ತಿನಲ್ಲಿ ಭಾರತದ ಆಟಗಾರ್ತಿ ದೀಪಿಕಾ ಕುಮಾರಿ 6-0 ನೇರ ಸೆಟ್‌ಗಳಿಂದ ಭೂತಾನ್‌ನ ಕರ್ಮ ಅವರನ್ನು ಮಣಿಸಿದರು.

ಕುಮಾರಿ ನೇರ ಸೆಟ್‌ಗಳಲ್ಲಿ ಕರ್ಮ ಅವರನ್ನು 6-0 ಗೋಲುಗಳಿಂದ ಸೋಲಿಸಿದರು. ಇದಕ್ಕೂ ಮುನ್ನ ನಡೆದ ಬಿಲ್ಲುಗಾರಿಕೆ ಪಂದ್ಯದಲ್ಲಿ ಭಾರತದ ಪ್ರವೀಣ್ ಜಾಧವ್, ಯುಎಸ್ಎಯ ಬ್ರಾಡಿ ಎಲಿಸನ್ ಅವರ ವಿರುದ್ಧ 1/16 ಎಲಿಮಿನೇಷನ್ ಸುತ್ತಿನಲ್ಲಿ ನೇರ ಸೆಟ್‌ಗಿಂದ ಸೋಲುಂಡಿದ್ದಾರೆ. ಎಲಿಸನ್ ವಿರುದ್ಧ ಪ್ರವೀಣ್‌ 6-0 ಗೋಲುಗಳಿಂದ ಪರಾಭವಗೊಂಡಿದ್ದಾರೆ.

ಇದನ್ನೂ ಓದಿ:ಟೋಕಿಯೋ ಒಲಿಂಪಿಕ್ಸ್​: ಆರ್ಚರಿಯಲ್ಲಿ ಮುನ್ನಡೆ, ಹಾಕಿಯಲ್ಲಿ ಹಿನ್ನಡೆ

ಬ್ಯಾಡ್ಮಿಂಟನ್‌: ಸಿಂಧು ಜಯಭೇರಿ

ಸಿಂಧುಗೆ ಗೆಲುವು

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು 2ನೇ ಗುಂಪಿನ ಪಂದ್ಯದಲ್ಲಿ ಹಾಂಗ್‌ಕಾಂಗ್‌ನ ಎನ್‌ಗ್ಯಾನ್ ಯಿ ಚೆಯುಂಗ್ ಅವರನ್ನು 21-9, 21-16 ಸೆಟ್‌ಗಳಿಂದ ಮಣಿಸಿದರು. ಆ ಮೂಲಕ ಟೋಕಿಯೊ ಒಲಿಂಪಿಕ್ಸ್‌ನ 16 ನೇ ಸುತ್ತಿನ ಮಹಿಳಾ ಸಿಂಗಲ್ಸ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸಾಯಿ ಪ್ರಣೀತ್‌ಗೆ ಸೋಲು

ಸಾಯಿ ಪ್ರಣೀತ್‌ಗೆ ಸೋಲು

ಮುಸಶಿನೋ ಫಾರೆಸ್ಟ್ ಪ್ಲಾಜಾ ಕೋರ್ಟ್ 3 ರಲ್ಲಿ ನಡೆದ ಬ್ಯಾಡ್ಮಿಂಟನ್‌ 2ನೇ ಗ್ರೂಪ್‌ ಡಿ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ನ ಮಾರ್ಕ್ ಕ್ಯಾಲ್ಜೌವ್ ವಿರುದ್ಧ ಸಾಯಿ ಪ್ರಣೀತ್ ಸೋಲುಂಡಿದ್ದಾರೆ. 21-14, 21-14 ನೇರ ಸೆಟ್‌ಗಳಿಂದ

ಕ್ಯಾಲ್ಜೌವ್ ವಿರುದ್ಧ ಪ್ರಣೀತ್ ಸೋಲು ಕಂಡಿದ್ದಾರೆ. ಈ ಸೋಲಿನೊಂದಿಗೆ, ಪ್ರಣೀತ್ ತಮ್ಮ ಎರಡೂ ಹಂತದ ಪಂದ್ಯಗಳಲ್ಲಿ ಸೋತಿದ್ದರಿಂದ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

Last Updated : Jul 28, 2021, 3:56 PM IST

ABOUT THE AUTHOR

...view details