ಟೋಕಿಯೋ :ಇಲ್ಲಿನ ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ಸ್ ಪ್ಲಾಜಾದಲ್ಲಿ ನಡೆದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ನ ಎ ಗುಂಪಿನ ಫೈನಲ್ ಪಂದ್ಯದಲ್ಲಿ ಭಾರತದ ಸತ್ವಿಕ್ಸೈರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ರಿಟಿಷ್ ಜೋಡಿ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರನ್ನು ಸೋಲಿಸಿದೆ.
ಭಾರತೀಯ ಜೋಡಿ ತಮ್ಮ ಮೊದಲ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರರಾದ ಚೀನಾದ ತೈಪೆಯ ಯಾಂಗ್ ಲೀ ಮತ್ತು ಚಿ-ಲಿನ್ ವಾಂಗ್ ಅನ್ನು ಸೋಲಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ವಿಶ್ವದ ನಂಬರ್ ಜೋಡಿ ಇಂಡೋನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸಂಜಯಾ ಸುಕಮುಲ್ಜೊ ವಿರುದ್ಧ ಸೋಲು ಕಂಡಿತ್ತು.