ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ನಲ್ಲಿ ನಡೆದ ಮಹಿಳೆಯರ 69 ಕೆಜಿ ಕುಸ್ತಿ ವಿಭಾಗದ ಪಂದ್ಯದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ಜರ್ಮನಿಯ ನಾಡಿನ್ ಅಪೆಟ್ಜ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಎದುರಾಳಿಗೆ ಭರ್ಜರಿ 'ಪಂಚ್' ಕೊಟ್ಟ ಲವ್ಲಿನಾ ಕ್ವಾರ್ಟರ್ ಫೈನಲ್ ಪ್ರವೇಶ - ಟೋಕಿಯೊ ಸುದ್ದಿ
ಮಹಿಳೆಯರ 69 ಕೆಜಿ ಕುಸ್ತಿ ವಿಭಾಗದ ಪಂದ್ಯದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್, ಜರ್ಮನಿಯ ನಾಡಿನ್ ಅಪೆಟ್ಜ್ ವಿರುದ್ಧ ಜಯಭೇರಿ ಬಾರಿಸಿದ್ದು, ಪದಕದಿಂದ ಒಂದು ಹೆಜ್ಜೆಯಷ್ಟೇ ದೂರವಿದ್ದಾರೆ.
ಬೊರ್ಗೊಹೈನ್
ಕೊಕುಗಿಕನ್ ಅರೆನಾದಲ್ಲಿ ನಡೆದ 16 ನೇ ಸುತ್ತಿನಲ್ಲಿ ಲವ್ಲಿನಾ, ನಾಡಿನ್ ಅವರನ್ನು ಅವರನ್ನು ಸೋಲಿಸಿದ್ದಾರೆ. ಲೊವ್ಲಿನಾ ಅವರ ಎದುರಾಳಿಯು ಅವರಂತೆಯೇ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ಗೆದ್ದಿದ್ದಾರೆ. ಆದರೆ, ಟೋಕಿಯೋ ಒಲಿಂಪಿಕ್ಸ್ನಲ್ಲಿ ಮಾತ್ರ ನಾಡಿನ್ ಅಪೆಟ್ಜ್ಗೆ ಲವ್ಲಿನಾ ಸೋಲುಣಿಸಿದ್ದಾರೆ. ಲವ್ಲಿನಾ ಮುಂದಿನ ಒಂದು ಪಂದ್ಯ ಗೆದ್ದರೆ ಭಾರತಕ್ಕೆ ಒಂದು ಪದಕ ಸಿಗೋದು ಖಚಿತವಾಗಿದೆ.
ಇನ್ನು ಮೇರಿ ಕೋಮ್ ಸದ್ಯ ಗೆಲುವಿನ ಹಾದಿಯಲ್ಲಿದ್ದು, ವಿಕಾಸ್ ಕ್ರಿಶನ್, ಮನೀಶ್ ಕೌಶಿಕ್ ಮತ್ತು ಆಶಿಶ್ ಕುಮಾರ್ ಪಂದ್ಯದಿಂದ ಹೊರಬಿದ್ದಿದ್ದಾರೆ.
Last Updated : Jul 27, 2021, 11:51 AM IST