ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​: 4ನೇ ದಿನ ಕಣಕ್ಕಿಳಿಯುವ ಭಾರತೀಯ ಕ್ರೀಡಾಪಟುಗಳು, ಕ್ರೀಡೆ, ಸಮಯದ ವಿವರ ಹೀಗಿದೆ..

ಟೋಕಿಯೋ ಒಲಿಂಪಿಕ್ಸ್​ 3ನೇ ದಿನ ಯಶಸ್ವಿಯಾಗಿ ಮುಗಿದಿದೆ. ಭಾರತ ತಂಡ 2ನೇ ದಿನ ಒಂದು ಪದಕ ಪಡೆದರೆ, 3ನೇ ದಿನ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಇನ್ನು ನಾಲ್ಕನೇ ದಿನದಲ್ಲೂ ಶೂಟಿಂಗ್, ಫೆನ್ಸಿಂಗ್ ಸೇರಿದಂತೆ ಕೆಲವು ಕ್ರೀಡೆಗಳಿವೆ. ಅವುಗಳಲ್ಲಿ ಭಾಗವಹಿಸುವ ಅಥ್ಲೀಟ್​ಗಳ ಸಂಪೂರ್ಣ ವಿವರ ಇಲ್ಲಿದೆ.

Tokyo Olympics Day 4
ಟೋಕಿಯೋ ಒಲಿಂಪಿಕ್ಸ್ 4ನೇ ದಿನ

By

Published : Jul 25, 2021, 10:46 PM IST

ಟೋಕಿಯೋ: ಪದಕರಹಿತವಾಗಿ ಭಾರತೀಯರ ಕ್ರೀಡಾಪಟುಗಳು ಒಲಿಂಪಿಕ್ಸ್​ನ 3ನೇ ದಿನ ಮುಗಿಸಿದ್ದಾರೆ. ನಾಲ್ಕನೇ ದಿನ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ನಾಳೆ 10 ಕ್ರೀಡೆಗಳು ನಡೆಯಲಿವೆ. ಅವುಗಳಲ್ಲಿ ಭಾರತೀಯ ಅಥ್ಲೀಟ್​ಗಳು ಕಣಕ್ಕಿಳಿಯುವ ಕ್ರೀಡೆಗಳ ವಿವರ ಇಲ್ಲಿದೆ.

ಫೆನ್ಸಿಂಗ್​: ವುಮೆನ್​ ಸಬೆರ್​ - ಭವಾನಿ ದೇವಿ vs ಬೆನ್ ಅಜೀಜಿ ನಾಡಿ - ಬೆಳಿಗ್ಗೆ 5:30

ಅರ್ಚರಿ: ಪುರುಷರ ತಂಡದ 16ರ ಸುತ್ತು(ಅತನು ದಾಸ್​, ಪ್ರವೀಣ್​ ಜಾಧವ್​, ತರುಂದೀಪ್​ ರಾಯ್​) ಬೆಳಿಗ್ಗೆ 6 ಗಂಟೆ

ಪುರುಷ ತಂಡದ ಪದಕ ಸುತ್ತು- ಬೆಳಿಗ್ಗೆ 10:15

ಬ್ಯಾಡ್ಮಿಂಟನ್: ಪುರುಷರ ಡಬಲ್ಸ್​- ಸಾತ್ವಿಕ್ ಸಾಯಿರಾಜ್​ ಮತ್ತು ಚಿರಾಗ್ ಶೆಟ್ಟಿ vs ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ

ಟೆನಿಸ್​: ಸುಮಿತ್ ನಗಾಲ್​ vs ಡೇನಿಲ್ ಮೆಡ್ವೆಡೆವ್​(ಖಚಿತವಾಗಿಲ್ಲ)

ಬಾಕ್ಸಿಂಗ್​ : ಮಿಡ್ಲ್​ವೇಟ್​- ಅಶೀಶ್ ಕುಮಾರ್​ vs ಎರ್ಬೀಕೆ ತುಹೋಹೆಟಾ- ಮಧ್ಯಾಹ್ನ 3:06

ಹಾಕಿ:ಭಾರತ ಮಹಿಳಾ ತಂಡ vs ಜರ್ಮನಿ- ಸಂಜೆ 5:45

ಸೈಲಿಂಗ್: ಪುರುಷರ ಲೇಸರ್ ರೇಸ್​ 3- ವಿಷ್ಣು ಸರವಣನ್- ಬೆಳಿಗ್ಗೆ 8:35

ಮಹಿಳೆರ ಲೇಸರ್​ ರ್ಯಾಡಿಯಲ್ ರೇಸ್​- ನೇತ್ರಾ ಕುಮಾನನ್​- ಬೆಳಿಗ್ಗೆ 11:05

ಶೂಟಿಂಗ್: ಪುರುಷರ ಸ್ಕೀಟ್​ ಕ್ವಾಲಿಫಿಕೇಶನ್​ 2ನೇ ದಿನ: ಅಂಗದ್​ ಬಜ್ವಾ, ಮೈರಾಜ್​ ಅಹ್ಮದ್​ ಖಾನ್​- ಬೆಳಿಗ್ಗೆ 6:30, ಫೈನಲ್ ಮಧ್ಯಾಹ್ನ 12:20

ಸ್ವಿಮ್ಮಿಂಗ್​: ಪುರುಷರ 200 ಮೀಟರ್​ ಬಟರ್​ ಫ್ಲೈ ಹೀಟ್ಸ್​- ಸಜನ್ ಪ್ರಕಾಶ್- ಮಧ್ಯಾಹ್ನ 3:46

ಟೇಬಲ್ ಟೆನಿಸ್​: ಪುರುಷರ ಸಿಂಗಲ್ಸ್ 2ನೇ ಸುತ್ತು: ಶರತ್​ ಕಮಲ್ vs ಟಿಯಾಗೊ ಅಪೊಲೊನಿಯಾ- ಬೆಳಿಗ್ಗೆ 6:30

ಮಹಿಳೆಯರ ಸಿಂಗಲ್ಸ್​ 2ನೇ ಸುತ್ತು- ಸುತೀರ್ಥ ಮುಖರ್ಜಿ vs ಫು ಯು- ಬೆಳಿಗ್ಗೆ 8:30

ಮಹಿಳೆಯರ ಸಿಂಗಲ್ಸ್​ 3ನೇ ಸುತ್ತು- ಮನಿಕಾ ಬಾತ್ರಾ vs ಸೋಫಿಯಾ ಪೊಲ್ಕಾನೊವ- ಮಧ್ಯಾಹ್ನ 1 ಗಂಟೆ

ABOUT THE AUTHOR

...view details