ಕರ್ನಾಟಕ

karnataka

ETV Bharat / sports

Tokyo Olympics: ಕತ್ತಿವರಸೆ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭವಾನಿ ದೇವಿಗೆ ಸೋಲು - ಟೋಕಿಯೊ ಒಲಿಂಪಿಕ್ಸ್‌ 2020

ಭಾರತದ ಫೆನ್ಸರ್​ ಭವಾನಿ ದೇವಿ, ಟುನೀಶಿಯಾದ ಎದುರಾಳಿ ನಾಡಿಯಾ ಬೆನ್ ಅಜೀಜಿ ಅವರನ್ನು ಕತ್ತಿ ವರಸೆ ಪಂದ್ಯದಲ್ಲಿ 15-3 ಅಂತರದಿಂದ ಮಣಿಸುವ ಮೂಲಕ ಮೊದಲ ಪಂದ್ಯ ಗೆದ್ದಿದ್ದಾರೆ. ಆದರೆ ಅವರು ಮುಂದಿನ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ.

Tokyo Olympics
ಮೊದಲ ಪಂದ್ಯ ಗೆದ್ದ ಫೆನ್ಸರ್ ಭವಾನಿ ದೇವಿ

By

Published : Jul 26, 2021, 7:11 AM IST

Updated : Jul 26, 2021, 8:04 AM IST

ಟೋಕಿಯೋ:ಜಪಾನ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದ ಭಾರತದ ಫೆನ್ಸರ್ ಭವಾನಿ ದೇವಿ 2ನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ.

ಫ್ರಾನ್ಸ್​ ದೇಶದ ಎದುರಾಳಿ ವಿರುದ್ಧ ಭವಾನಿ ದೇವಿ ಸೋಲು ಅನುಭವಿಸಿದ್ದಾರೆ. ಇದಕ್ಕೂ ಮುನ್ನ ಭವಾನಿ ದೇವಿ ಟುನೀಶಿಯಾದ ಎದುರಾಳಿ ನಾಡಿಯಾ ಬೆನ್ ಅಜೀಜಿಯವರನ್ನು ಕತ್ತಿವರಸೆ ಪಂದ್ಯದಲ್ಲಿ 15-3 ಅಂತರದಿಂದ ಮಣಿಸುವ ಮೂಲಕ ಆರು ನಿಮಿಷಗಳಲ್ಲಿ ಪಂದ್ಯ ಗೆಲುವು ಸಾಧಿಸಿದ್ದರು.

ಭಾರತದಿಂದ ಫೆನ್ಸಿಂಗ್‌ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಭವಾನಿ ದೇವಿ ಪಾತ್ರರಾಗಿದ್ದಾರೆ. ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭವಾನಿ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಸಿಕ್ಕಿತ್ತು.

ಇದನ್ನೂ ಓದಿ:Kargil Vijay Divas: ಹುತಾತ್ಮ ಯೋಧರಿಗೆ ಗೌರ ಸಲ್ಲಿಸಿದ ಸೇನಾ ಮುಖ್ಯಸ್ಥ ರಾವತ್!

Last Updated : Jul 26, 2021, 8:04 AM IST

ABOUT THE AUTHOR

...view details