ಟೋಕಿಯೋ, ಜಪಾನ್:ಭಾರತದ ಅತ್ಯಂತ ಭರವಸೆಯ ಆಟಗಾರ, ಶೂಟಿಂಗ್ ಸ್ಪರ್ಧಿ ಸೌರಭ್ ಚೌಧರಿ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ.
ಸೌರಭ್ ಚೌಧರಿಕ್ವಾಲಿಫೈಯರ್ನಲ್ಲಿ ಮೊದಲಿಗರಾಗಿ ಫೈನಲ್ ತಲುಪಿದ್ದರು. ಅವರು ಸಿರೀಸ್ ಸಿಕ್ಸ್ ವಿಭಾಗದಲ್ಲಿ ಗಳಿಸಿದ 586 ಸ್ಕೋರ್ ಒಲಿಂಪಿಕ್ ರೆಕಾರ್ಡ್ಗೆ ಸನಿಹದಲ್ಲಿತ್ತು. ಹೀಗಾಗಿ ಪದಕ ಪಡೆಯುವ ಭರವಸೆಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಸೌರಭ್ ಚೌಧರಿ ಕೂಡಾ ಇದ್ದರು. ಆದರೆ ಫೈನಲ್ ಪಂದ್ಯದಲ್ಲಿ ಅವರು ಏಳನೇ ಸ್ಥಾನ ಪಡೆದಿದ್ದಾರೆ.