ಟೋಕಿಯೊ:ಟೋಕಿಯೋ ಒಲಿಂಪಿಕ್ಸ್ನ 12ನೇ ದಿನವಾದ ಇಂದು ಭಾರತದ ಪುರುಷರ ಹಾಕಿ ತಂಡವು ಸೆಮಿಫೈನಲ್ನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಸೆಣೆಸಲಿದೆ. ಬೆಲ್ಜಿಯಂ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಟೋಕಿಯೊ ಒಲಿಂಪಿಕ್ಸ್ನಲ್ಲಿ ಅಜೇಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕವು ಖಾತ್ರಿಯಾಗಲಿದೆ.
ಇಂದು ಭಾಗಿಯಾಗಲಿರುವ ಭಾರತದ ತಂಡ ಮತ್ತು ಕ್ರೀಡಾಪಟುಗಳ ವಿವರ:
ಭಾರತೀಯ ಪುರುಷರ ತಂಡ - ಹಾಕಿ:
ಎಲ್ಲರ ಗಮನ ಭಾರತೀಯ ಪುರುಷರ ಹಾಕಿ ತಂಡದ ಮೇಲೆ ನೆಟ್ಟಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು 41 ವರ್ಷಗಳ ಒಲಿಂಪಿಕ್ ಪದಕದ ಬರಕ್ಕೆ ಅಂತ್ಯಹಾಡಲು ಸುವರ್ಣಾವಕಾಶವಿದೆ. ಮನ್ಪ್ರೀತ್ ಸಿಂಗ್ ನೇತೃತ್ವದ ತಂಡವು 1972ರ ಬಳಿಕ ಸೆಮಿಸ್ ತಲುಪಿದೆ.
ದಿಲ್ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ಅವರ ಗೋಲುಗಳ ನೆರವಿನಿಂದ ಭಾರತವು ಕ್ವಾರ್ಟರ್ ಫೈನಲ್ನಲ್ಲಿ 3-1 ಅಂತರದಿಂದ ಗ್ರೇಟ್ ಬ್ರಿಟನ್ ಅನ್ನು ಮಣಿಸಿತ್ತು.
ಅನು ರಾಣಿ - ಜಾವೆಲಿನ್ ಥ್ರೋ: