ಟೋಕಿಯೋ: ಜಪಾನ್ನ ಟೋಕಿಯೋದಲ್ಲಿ ಜುಲೈ 23ರಿಂದ ಆರಂಭಗೊಂಡಿದ್ದ ಟೋಕಿಯೋ ಒಲಿಂಪಿಕ್ಸ್ 2020 ನಿನ್ನೆಗೆ ಮುಕ್ತಾಯವಾಗಿದ್ದು, 16ನೇ ದಿನವಾದ ಇಂದು ಭರ್ಜರಿಯಾಗಿ ಸಮಾರೋಪ ಸಮಾರಂಭ ನಡೆಯಲಿದೆ.
ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿ ಒಟ್ಟು 7 ಪದಕ ಬಂದಿದೆ. ಈ ಮೂಲಕ ಅತಿ ಹೆಚ್ಚು ಪದಕ ಗೆದ್ದು ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದೆ. ಲಂಡನ್ ಒಲಿಂಪಿಕ್ಸ್ ವೇಳೆ ನಿರ್ಮಾಣಗೊಂಡಿದ್ದ ದಾಖಲೆಯನ್ನು ಮೀರಿದ ಸಾಧನೆಗೈದ ಕ್ರೀಡಾಪಟುಗಳ ಹೊಸ ಎತ್ತರಕ್ಕೆ ದೇಶದ ಧ್ವಜವನ್ನು ಕೊಂಡೊಯ್ದರು. ಜೊತೆಗೆ ಒಲಿಂಪಿಕ್ಸ್ ಪಾಯಿಂಟ್ ಪಟ್ಟಿಯಲ್ಲಿ ಭಾರತ 47ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಇತಿಹಾಸ ಬರೆದ ಭಾರತ.. ಅತಿ ಹೆಚ್ಚು ಪದಕ ಗೆದ್ದ ಸಾಧನೆ