ಟೋಕಿಯೊ :ಜಾಗತಿಕ ಕ್ರೀಡೋತ್ಸವ ಟೋಕಿಯೊ ಒಲಿಂಪಿಕ್ಸ್ ಸಮಾರೋಪ ಸಮಾರಂಭ ಆರಂಭವಾಗಿದೆ. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಜರಂಗ್ ಪೂನಿಯಾ ಭಾರತದ ಧ್ವಜ ಹಿಡಿದು ಒಲಿಂಪಿಕ್ ಕ್ರೀಡಾಂಗಣವನ್ನು ಇತರ ರಾಷ್ಟ್ರಗಳ ಜೊತೆ ಪ್ರವೇಶಿಸಿದ್ದಾರೆ.
ತಮ್ಮ ತಮ್ಮ ದೇಶಗಳ ಧ್ವಜ ಹಿಡಿದು ಬಂದ ಕ್ರೀಡಾಪಟುಗಳು ಜುಲೈ 23ರಿಂದ ಆರಂಭಗೊಂಡಿದ್ದ ಟೋಕಿಯೊ ಒಲಿಂಪಿಕ್ಸ್ ನಿನ್ನೆಗೆ ಮುಕ್ತಾಯವಾಗಿದೆ. 16ನೇ ದಿನವಾದ ಇಂದು ಭರ್ಜರಿಯಾಗಿ ಸಮಾರೋಪ ಸಮಾರಂಭ ನಡೆಯುತ್ತಿದೆ.
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿ ಒಟ್ಟು 7 ಪದಕ ಬಂದಿವೆ. ಈ ಮೂಲಕ ಅತಿ ಹೆಚ್ಚು ಪದಕ ಗೆದ್ದು ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದೆ. ಜೊತೆಗೆ ಒಲಿಂಪಿಕ್ಸ್ ಪಾಯಿಂಟ್ ಪಟ್ಟಿಯಲ್ಲಿ ಭಾರತ 47ನೇ ಸ್ಥಾನದಲ್ಲಿದೆ.
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ ನೇರ ಪ್ರಸಾರ ವೀಕ್ಷಣೆ
ಟಿವಿಯಲ್ಲಿ ಸಮಾರಂಭದ ನೇರಪ್ರಸಾರ ನೋಡ ಬಯಸುವವರು Sony TEN 1 HD/SD, Sony TEN 2 HD/SDಯಲ್ಲಿ ಇಂಗ್ಲಿಷ್ ಕಾಮೆಂಟರಿಯೊಂದಿಗೆ ವೀಕ್ಷಿಸಬಹುದು. Sony TEN 3 HD/SD ಹಿಂದಿ ಭಾಷೆ ಕಾಮೆಂಟರಿಯನ್ನು ಹೊಂದಿರುತ್ತದೆ. ಆನ್‌ಲೈನ್ ಸ್ಟ್ರೀಮಿಂಗ್ ಬಯಸುವವರು SonyLivನಲ್ಲಿ ನೋಡಬಹುದಾಗಿದೆ.