ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ವೇಟ್ ಲಿಫ್ಟಿಂಗ್ ಮೀರಾಬಾಯಿ ಚಾನು ಇಂದು ಜಪಾನ್ನಿಂದ ತವರಿಗೆ ಮರಳಿದ್ದಾರೆ. ಏರ್ಪೋರ್ಟ್ನಲ್ಲಿ ತರಬೇತುದಾರ ವಿಜಯ್ ಶರ್ಮಾ ಜತೆಗಿನ ಫೋಟೋವನ್ನು ಚಾನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನನ್ನ ಜೀವನದ ಸ್ಮರಣೀಯ ಕ್ಷಣಗಳಿಗಾಗಿ ಟೋಕಿಯೋ 2020 ಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ನೀಡಿದ್ದಾರೆ.
ಚಾನು ಅವರ ಟ್ವೀಟ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಪ್ರತಿಕ್ರಿಯೆ ನೀಡಿದೆ. ಜತೆಗೆ 1800 ಕ್ಕೂ ಹೆಚ್ಚು ರಿಟ್ವೀಟ್ಗಳು ಮತ್ತು 32 ಸಾವಿರ ಲೈಕ್ಗಳು ಬಂದಿವೆ. 2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಪದಕ ಗಳಿಸಿದ ಬಳಿಕ ಮತ್ಯಾರೂ ಈ ಸಾಧನೆ ಮಾಡಿರಲಿಲ್ಲ. ಇದೀಗ ಮೀರಾಬಾಯಿ ಚಾನು ಮಹಿಳಾ 49 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಎತ್ತಿ ಬೆಳ್ಳಿ ಪದಕ ಗೆದ್ದಿದ್ದಾರೆ.