ಕರ್ನಾಟಕ

karnataka

ETV Bharat / sports

'ಗೋಲ್ಡನ್​​ ಸ್ಲ್ಯಾಮ್'​​ ಕನಸು ಭಗ್ನ: ಸೆಮಿಫೈನಲ್​ನಲ್ಲಿ ಜೊಕೊವಿಚ್‌ಗೆ ಅಚ್ಚರಿಯ ಸೋಲು

ವಿಶ್ವದ ನಂಬರ್​ 1 ಟೆನಿಸ್​ ಆಟಗಾರ ನೊವಾಕ್​ ಜೊಕೊವಿಚ್​​ ಟೋಕಿಯೋ ಒಲಿಂಪಿಕ್ಸ್​ನ ಸೆಮಿಫೈನಲ್​ನಲ್ಲಿ ಸೋಲು ಕಂಡರು.

Novak Djokovic
Novak Djokovic

By

Published : Jul 30, 2021, 5:12 PM IST

ಟೋಕಿಯೋ: 20ನೇ ಬಾರಿಗೆ ಗ್ರ್ಯಾನ್​​ ಸ್ಲ್ಯಾಮ್​​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸರ್ಬಿಯಾದ ಸ್ಟಾರ್​​ ಟೆನಿಸ್​​ ಆಟಗಾರ ನೊವಾಕ್​​ ಜೊಕೊವಿಚ್​​ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸಿಂಗಲ್ಸ್​ ಸೆಮಿಫೈನಲ್​ನಲ್ಲಿ ಅಚ್ಚರಿ ರೀತಿಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಅವರು ಕನಸು ಭಗ್ನಗೊಂಡಿದೆ.

34 ವರ್ಷದ ಜೊಕೊವಿಚ್​​ ಈಗಾಗಲೇ ಅಸ್ಟ್ರೇಲಿಯಾ ಓಪನ್​, ಅಮೆರಿಕ, ಫ್ರೆಂಚ್​ ಹಾಗೂ ವಿಂಬಲ್ಡನ್​​ ಗೆದ್ದು, ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರು. ಆದರೆ ಇಂದು ನಡೆದ ಸಿಂಗಲ್ಸ್​​ ಸೆಮಿಫೈನಲ್ ​ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್​ ಜೆರೆವ್​ ವಿರುದ್ಧ 6-1, 3-6, 1-6 ಅಂತರದಿಂದ ಸೋಲು ಅನುಭವಿಸಿದರು.

ಜಪಾನ್​ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನ ಟೆನಿಸ್​ ಪುರುಷರ ವಿಭಾಗದ ಸಿಂಗಲ್ಸ್​​ ಸೆಮಿಫೈನಲ್​ ಪಂದ್ಯದಲ್ಲಿ ಸರ್ಬಿಯಾದ ನೊವಾಕ್​ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಆರಂಭದಿಂದಲೇ ಅಲೆಕ್ಸಾಂಡರ್​ ಉತ್ತಮ ಹೊಡೆತಗಳಿಂದ ನೊವಾಕ್​ ಮೇಲೆ ಸವಾರಿ ಮಾಡಿದರು. ಹೀಗಾಗಿ ಮೊದಲ ಸೆಟ್​ನಲ್ಲಿ 6-1 ಅಂತರದಿಂದ ಗೆಲುವು ದಾಖಲಿಸಿದರು. ಇದಾದ ಬಳಿಕ ಕಮ್​ಬ್ಯಾಕ್​ ಮಾಡಿದ ನೊವಾಕ್​​ 3-6 ಅಂತರದಿಂದ ಗೆಲುವು ದಾಖಲು ಮಾಡಿದ್ದರು. ಆದರೆ ಕೊನೆ ಸುತ್ತಿನಲ್ಲಿ ಸೋಲಿಗೆ ಶರಣಾಗಿ 1-6 ಅಂತರದಿಂದ ಪಂದ್ಯ ಕೈಚೆಲ್ಲಿದರು.

ಇದನ್ನೂ ಓದಿ: ಹಗಲಿಡೀ ದುಡಿದು ಸಿಹಿನಿದ್ರೆಯಲ್ಲಿದ್ದ ಆರು ಮಂದಿ ಕಾರ್ಮಿಕರು ಚಿರನಿದ್ರೆಗೆ ಜಾರಿದ್ರು!

ಸೆಮಿಫೈನಲ್​ನಲ್ಲಿ ಸೋಲು ಕಂಡಿರುವ ಜೊಕೊವಿಚ್​ ಇದೀಗ ಕಂಚಿನ ಪದಕಕ್ಕಾಗಿ ಸ್ಪೇನ್​​ನ ಕ್ಯಾರೆನೊ ಬುಸ್ಟಾ ವಿರುದ್ಧ ಹೋರಾಟ ನಡೆಸಲಿದ್ದಾರೆ. ಪ್ರಸಕ್ತ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜೊಕೊವಿಚ್​​ ಚಿನ್ನದ ಪದಕ ಗೆದ್ದಿದ್ದರೆ ಗೋಲ್ಡನ್​​ ಸ್ಲ್ಯಾಮ್ ಆಗಿ ಹೊರಹೊಮ್ಮುತ್ತಿದ್ದರು.

ABOUT THE AUTHOR

...view details