ಕರ್ನಾಟಕ

karnataka

ETV Bharat / sports

ತಿಹಾರ್​ ಜೈಲಿನಿಂದಲೇ ರವಿ ದಹಿಯಾ ಕುಸ್ತಿ ನೋಡಿ 'ಭಾವೋದ್ವೇಗ'ಕ್ಕೊಳಗಾದ ಸುಶೀಲ್ ಕುಮಾರ್​! - ಕುಸ್ತಿಪಟು ಸುಶೀಲ್​ ಕುಮಾರ್​​

ತಿಹಾರ್​ ಜೈಲಿನಿಂದಲೇ ಕುಸ್ತಿಪಟು ರವಿ ಕುಮಾರ್ ದಹಿಯಾ ಫೈನಲ್​ ಪಂದ್ಯ ವೀಕ್ಷಣೆ ಮಾಡಿರುವ ಸುಶೀಲ್ ಕುಮಾರ್​ ಭಾವೋದ್ವೇಗಕ್ಕೊಳಗಾಗಿದ್ದರು ಎಂದು ತಿಳಿದು ಬಂದಿದೆ.

Sushil Kumar
Sushil Kumar

By

Published : Aug 5, 2021, 8:40 PM IST

ನವದೆಹಲಿ:2012ರ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಕುಸ್ತಿಪಟು ಇದೀಗ ಅಪರಾಧಿ. ಯುವ ಕುಸ್ತಿಪಟು ಸಾಗರ್​ ಧಂಕರ್​​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನ ಬಂಧನ ಮಾಡಲಾಗಿದ್ದು, ತಿಹಾರ್ ಜೈಲಿನಲ್ಲಿಡಲಾಗಿದೆ. ಅಲ್ಲಿಂದಲೇ ರವಿ ದಹಿಯಾ ಫೈನಲ್​ ಪಂದ್ಯ ವೀಕ್ಷಣೆ ಮಾಡಿರುವ ಅವರು, ಭಾವೋದ್ವೇಗಕ್ಕೊಳಗಾಗಿದ್ದಾಗಿ ತಿಳಿದು ಬಂದಿದೆ.

2012ರ ನಂತರ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ರವಿ ದಹಿಯಾ ಯಶಸ್ವಿಯಾಗಿದ್ದು, ಆದರೆ ಫೈನಲ್​​​ ಪಂದ್ಯದಲ್ಲಿ ಸೋಲು ಕಂಡಿದ್ದಕ್ಕಾಗಿ ಸ್ವಲ್ಪ ನಿರಾಸೆಗೊಳಗಾಗಿದ್ದಾರೆ. ಈ ಪಂದ್ಯ ವೀಕ್ಷಣೆ ಮಾಡ್ತಿದ್ದ ವೇಳೆ ಸುಶೀಲ್ ಕುಮಾರ್​ ಭಾವೋದ್ವೇಗಕ್ಕೊಳಗಾಗಿದ್ದರು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

23 ವರ್ಷದ ಕುಸ್ತಿಪಟು ರವಿ ದಹಿಯಾ ಕೂಡ ದೆಹಲಿಯ ಛತ್ರಸಾಲ್​ ಕ್ರೀಡಾಂಗಣದಲ್ಲೇ ತರಬೇತಿ ಪಡೆದುಕೊಂಡಿದ್ದು, ಸುಶೀಲ್​ ಕುಮಾರ್​ ಹಾಗೂ ಯೋಗೇಶ್ವರ್ ದತ್ ಒಟ್ಟಿಗೆ ಇಲ್ಲಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇದನ್ನೂ ಓದಿರಿ: ಕುಸ್ತಿಪಟು ಕೊಲೆ ಪ್ರಕರಣ: ಸುಶೀಲ್​ ಕುಮಾರ್​ ಸೇರಿ ಇತರರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

ಮೇ. 4ರ ಮಧ್ಯರಾತ್ರಿ 23 ವರ್ಷದ ಕುಸ್ತಿಪಟು ಸಾಗರ್ ಧನ್ಕರ್ ಹಾಗೂ ಆತನ ಸ್ನೇಹಿತರಾದ ಸೋನು ಹಾಗೂ ಅಮಿತ್ ಕುಮಾರ್ ಮೇಲೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಸಹಚರರು ಹಲ್ಲೆ ನಡೆಸಿದ್ದರು. ತತ್ಪರಿಣಾಮ ಸಾಗರ್ ಧನ್ಕರ್ ಮೃತಪಟ್ಟಿದ್ದರು. ಎಲೆಕ್ಟ್ರಾನಿಕ್ ಸಾಕ್ಷ್ಯದಲ್ಲಿ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದು, ಸ್ಪಷ್ಟವಾಗಿತ್ತು. ಇದೇ ಕಾರಣಕ್ಕಾಗಿ ಈಗಾಗಲೇ ಅವರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.

ತಿಹಾರ್​ ಜೈಲಿನಲ್ಲಿರುವ ಸುಶೀಲ್​ ಕುಮಾರ್​​, ಒಲಿಂಪಿಕ್ಸ್​ ವೀಕ್ಷಣೆ ಮಾಡಲು ತಮಗೆ ಟಿವಿ ವ್ಯವಸ್ಥೆ ಮಾಡುವಂತೆ ಅಲ್ಲಿನ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿ, ಟಿವಿ ವ್ಯವಸ್ಥೆ ಮಾಡಲಾಗಿತ್ತು.

ABOUT THE AUTHOR

...view details