ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆದ್ದು ಭಾರತ ತನ್ನ ಹಿಂದಿನ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿತು. ಈ ಸಂತಸದ ಸಂದರ್ಭದಲ್ಲಿ ಮಾಜಿ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರು ತಮ್ಮ ಕಾಲದಲ್ಲಿ ಕ್ರೀಡಾ ಮಂತ್ರಿಗಳು ಹೇಗಿದ್ದರು ಮತ್ತು ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
"ಭಾರತ ಸರ್ಕಾರವು ಕ್ರೀಡಾಪಟುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಪದಕಗಳನ್ನು ಗೆದ್ದ ನಂತರ ಪ್ರಧಾನಿ ಮೋದಿಯವರು ಕರೆ ಮಾಡಿ ಕ್ರೀಡಾಪಟುಗಳೊಂದಿಗೆ ಮಾತನಾಡುತ್ತಿದ್ದಾರೆ. ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ನಾನು ಭಾಗವಹಿಸಿದ್ದಾಗ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನನ್ನನ್ನು ಅಭಿನಂದಿಸಿದ್ದರು, ಅದನ್ನು ಬಿಟ್ಟು ಬೇರೇನೂ ಇಲ್ಲ. ನಾವು ಒಲಿಂಪಿಕ್ಸ್ ಆಡುವಾಗ ಕ್ರೀಡಾ ಸಚಿವರು ಕೂಡ ಅಲ್ಲಿಗೆ ಭೇಟಿ ನೀಡುತ್ತಿದ್ದರು. ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದಾಗಲೂ ಭಾರತವು ಸಂಭ್ರಮಿಸಿತ್ತು. ಆದರೆ ಕ್ರೀಡಾ ಸಚಿವಾಲಯಕ್ಕೆ ಇದು ದೊಡ್ಡ ವಿಚಾರ ಎನಿಸುತ್ತಿರಲಿಲ್ಲ" ಎಂದು ಲಾಂಗ್ ಜಂಪರ್ ಅಂಜು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಕಂಚಿನ ವೀರರ' ಜೊತೆ ಪ್ರಧಾನಿ ಮೋದಿ ಮಾತುಕತೆ: ಸಾಧಕರಿಗೆ ಶುಭಾಶಯ