ಟೋಕಿಯೊ (ಜಪಾನ್): ಟೋಕಿಯೊ ಪ್ಯಾರಾಲಿಂಪಿಕ್(Tokyo Paralympics)ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೀಗ P4 ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರೆ, ಸಿಂಗರಾಜ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
19 ವರ್ಷದ ಮನೀಶ್ ನರ್ವಾಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದರೆ, ಸಿಂಗರಾಜ್ 2ನೇ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಟ್ಟಿದ್ದಾರೆ. ಇದಕ್ಕೂ ಮೊದಲು ನಡೆದ ಬ್ಯಾಡ್ಮಿಂಟನ್ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಮೋದ್ ಭಗತ್ ಫೈನಲ್ ಪ್ರವೇಶಿಸಿದ್ದರು. ಇದೀಗ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ.
ಸಿಂಗರಾಜ್ ಪದಕ ಗೆಲ್ಲುತ್ತಿದ್ದಂತೆ ಇತ್ತ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಹರಿಯಾಣದ ನಿವಾಸದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ನನಗೆ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಂತೋಷಕ್ಕೆ ಮಿತಿಯಿಲ್ಲ ಎಂದು ಸಿಂಗರಾಜ್ ತಂದೆ ಪ್ರೇಮ್ ಸಿಂಗ್ ಅಧಾನ ಸಂತಸ ಹಂಚಿಕೊಂಡಿದ್ದಾರೆ.
ಇತ್ತ ಮನೀಶ್ ಅಗರ್ವಾಲ್ ಊರಿನಲ್ಲೂ ಸಂಭ್ರಮ ಮನೆ ಮಾಡಿದ್ದು, ಅವರ ನಿವಾಸದೆದರು ಕುಟುಂಬಸ್ಥರು, ಸ್ನೇಹಿತರು ಕುಣಿದು ಸಂಭ್ರಮಿಸಿದ್ದಾರೆ.
ಇದಕ್ಕೂ ಮೊದಲು ಶೋಪೀಸ್ ಈವೆಂಟ್‌ನಲ್ಲಿ ಈಗಾಗಲೇ ಒಂದು ಫೈನಲ್ ಆಡಿದ್ದ ಮನೀಶ್ ಮತ್ತು ಸಿಂಗ್ರಾಜ್ ಮೊದಲ ಸರಣಿಯ ಅಂತ್ಯದ ನಂತರ ಕ್ರಮವಾಗಿ 91 ಮತ್ತು 93 ಅಂಕ ಗಳಿಸಿದರು.