ಟೋಕಿಯೊ(ಜಪಾನ್) :ಪ್ಯಾರಾಲಿಂಪಿಕ್ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಈಗ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗಳಿಸಿದ್ದಾರೆ.
ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17ರ ನೇರ ಗೇಮ್ಗಳಿಂದ ಸೋಲಿಸಿದ ಪ್ರಮೋದ್ ಭಗತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ರಮೋದ್ ಭಗತ್ ಸೆಮಿ ಫೈನಲ್ನಲ್ಲಿ ಜಪಾನ್ನ ಡೈಸೂಕ್ ಫುಜಿಹಾರ್ ವಿರುದ್ಧ 21-11, 21-16 ನೇರ ಗೆಮ್ಗಳ ಮೂಲಕ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು.