ಟೋಕಿಯೋ:ಭಾರತೀಯ ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಎ.ಶರತ್ ಕಮಲ್ ಮೂರನೇ ಸುತ್ತಿಗೆ ಆಯ್ಕೆಯಾಗಿದ್ದಾರೆ. ಎರಡನೇ ಸುತ್ತಿನಲ್ಲಿ ಪೋರ್ಚುಗಲ್‌ನ ಟಿಯಾಗೊ ಪೊಲೊನಿಯಾರನ್ನು ಮಣಿಸಿದ್ದು, ಮೂರನೇ ಹಂತದಲ್ಲಿ ಒಲಿಂಪಿಕ್ಸ್ನ ಹಾಲಿ ಚಾಂಪಿಯನ್ ಮಾ ಲಾಂಗ್ ಅವರೊಂದಿಗೆ ಸೆಣಸಾಡಲಿದ್ದಾರೆ.
ಶರತ್ ಕಮಲ್ (39) ಎರಡನೇ ಸುತ್ತಿನಲ್ಲಿ ಕೇವಲ 49 ನಿಮಿಷಗಳ ಅವಧಿಯಲ್ಲಿ 2-11, 11-8, 11-5, 9-11, 11-6, 11-9 ರಿಂದ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.