ಟೋಕಿಯೋ:2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದ ಭಾರತದ ಅಥ್ಲೀಟ್ ಅವಿನಾಶ್ ಸಾಬ್ಲೆ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
3000 ಮೀಟರ್ ಸ್ಟೀಪಲ್‌ಚೇಸ್ ಗುರಿಯನ್ನು ತಲುಪಲು 26 ವರ್ಷದ ಸಾಬ್ಲೆ 8: 18.12 ಸಮಯವನ್ನು ತೆಗೆದುಕೊಂಡರು. ಈ ಮೂಲಕ ಅವರು 44 ಅಥ್ಲೆಟಿಕ್ಸ್ನಲ್ಲಿ 13ನೇ ಸ್ಥಾನ ಪಡೆದರು. ಹೀಗಾಗಿ ಅವರು ಫೈನಲ್ ಪಂದ್ಯದಿಂದ ಹೊರ ಬಿದ್ದಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಫೆಡರೇಷನ್ ಕಪ್ ಓಟದಲ್ಲಿ ಸಾಬ್ಲೆ 8: 20:20 ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಒಲಿಂಪಿಕ್ಸ್ನಲ್ಲಿ ಈಗ ಮುರಿದಿದ್ದಾರೆ. ಆದರೆ, ಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ. 2019ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 8 ನಿಮಿಷ 22 ಸೆಕೆಂಡ್‌ಗಳ ಮಾನದಂಡ ಇರಿಸಲಾಗಿತ್ತು.
ಆ ವೇಳೆ ನಡೆದ ಸ್ಪರ್ಧೆಯಲ್ಲಿ ಅವಿನಾಶ್ 8 ನಿಮಿಷ 21:37 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಟೋಕಿಯೋ ಗೇಮ್ಸ್‌ಗೆ ಪ್ರವೇಶ ಪಡೆದಿದ್ದರು. ಜತೆಗೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ (8:28:94) ಯನ್ನು ಮುರಿದಿದ್ದರು. 2019 ವರ್ಷದಲ್ಲಿ 4 ಬಾರಿ ರಾಷ್ಟ್ರೀಯ ದಾಖಲೆ ಮುರಿದ ಸಾಧನೆಯನ್ನು ಅವಿನಾಶ್ ಮಾಡಿದ್ದಾರೆ.
ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರ ಮೂಲದ 25 ವರ್ಷದ ಅವಿನಾಶ್, 2013-14ರಲ್ಲಿ ಸಿಯಾಚಿನ್ನಲ್ಲಿ ಸೇವೆ ಸಲ್ಲಿಸಿದ್ದರು. ರಾಜಸ್ಥಾನ, ಸಿಕ್ಕಿಂನಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.