ಟೋಕಿಯೋ: ಭಾರತದ ಸ್ಟಾರ್ ಕುಸ್ತಿಪಟುಗಳಾದ ರವಿ ದಹಿಯಾ ಮತ್ತು ದೀಪಕ್ ಪೂನಿಯಾ ಮಂಗಳವಾರ ಬಿಡುಗಡೆಯಾಗಿರುವ ಡ್ರಾನಲ್ಲಿ ಸುಲಭದ ಸವಾಲು ಪಡೆದಿದ್ದಾರೆ. ರವಿ ಕೊಲಂಬಿಯಾದ ಟೈಗ್ರೆರೋಸ್ ಉರ್ಬಾನೋ ಅವರನ್ನು ಎದುರಿಸಲಿದ್ದಾರೆ. ಭಾರತೀಯ ಕುಸ್ತಿಪಟುಗೆ ಸೆಮಿಫೈನಲ್ ಪ್ರವೇಶಿಸುವುದು ಕಷ್ಟ ಪಡಬೇಕಾಗಿಲ್ಲ.
2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿರುವ ದಹಿಯಾ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಕೊಲಂಬಿಯಾ ಕುಸ್ತಿಪಟುವಿನ ವಿರುದ್ಧ ಗೆಲುವು ಸಾಧಿಸಿದರೆ, ನಂತರ ಅಲ್ಜೀರಿಯಾದ ಅಬ್ದೆಲ್ಹಾಕ್ ಖೇರಾಬಾಚ್ ಅಥವಾ ಬಲ್ಗೆರಿಯಾದ ಜಾರ್ಜಿ ವ್ಯಾಲೆಂಟಿನೋವ್ ವಾಂಗೆಲೋವ್ ಸವಾಲು ಎದುರಿಸಲಿದ್ದಾರೆ.
ಸೆಮಿಫೈನಲ್ನಲ್ಲಿ ಟಾಪ್ ಸೀಡ್ ಆಗಿರುವ ಸರ್ಬಿಯಾದ ಸ್ಟೆವನ್ ಆ್ಯಂಡಿಯಾ ಮಿಕಿಕ್ ಅಥವಾ ಜಪಾನ್ನ ಯುಕಿ ತಕಹಶಿ ವಿರುದ್ಧ ಸೆಣಸಾಡುವ ಸಾಧ್ಯತೆಯಿದೆ.86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ತಮ್ಮ ಮೊದಲ ಪಂದ್ಯದಲ್ಲಿ ಆಫ್ರಿಕನ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ನೈಜೀರಿಯಾದ ಎಕೆರೆಕೆಮೆ ಅಗಿಯೊಮೋರ್ ವಿರುದ್ಧ ಸ್ಪರ್ಧಿಸಲಿದ್ದಾರೆ.