ಟೋಕಿಯೋ: ಶನಿವಾರ ಭಾರತೀಯ ಆರ್ಚರ್ಗಳಿಗೆ ಮಿಶ್ರದಿನವಾಗಿದೆ. ಭಾರತದ ಪ್ಯಾರಾ ಆರ್ಚರ್ ರಾಕೇಶ್ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಆದರೆ ಶ್ಯಾಮ್ ಸುಂದರ್ ಸ್ವಾಮಿ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.
ಕುಮಾರ್ ಹಿಂದಿನ ದಿನವಷ್ಟೇ ಅರ್ಹತಾ ಸುತ್ತಿನಲ್ಲಿ 720 ಅಂಕಗಳಲ್ಲಿ 699 ಪಡೆದಿದ್ದರು. ವೀಲ್ಚೇರ್ ವಿಭಾಗದಲ್ಲಿ 36 ವರ್ಷದ ಕುಮಾರ್ ಹಾಂಕಾಂಗ್ನ ಕಾ ಚುಯೆನ್ ನ್ಗಾಯ್ ಅವರನ್ನು 13 ಅಂಕಗಳ ಅಂತರದಿಂದ ಸುಲಭವಾಗಿ ಜಯಿಸಿ ಪ್ರೀ ಕ್ವಾರ್ಟರ್ ಫೈನಲ್ಸ್ಗೆ ಲಗ್ಗೆಯಿಟ್ಟರು.