ಟೋಕಿಯೋ(ಜಪಾನ್):ಭಾರತದ ಪ್ಯಾರಾಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಪಂದ್ಯದಲ್ಲಿ ಉಕ್ರೇನ್ನ ಒಲೆಕ್ಸಾಂಡರ್ ಚೈರ್ಕೋವ್ ಅವರನ್ನು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮಣಿಸುವ ಮೂಲಕ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಆಗಿರುವ ಪ್ರಮೋದ್ ಭಗತ್ 26 ನಿಮಿಷಗಳಲ್ಲಿ 21-12 21-9 ಸೆಟ್ಗಳ ಅಂತರದಿಂದ ಒಲೆಕ್ಸಾಂಡರ್ ಚೈರ್ಕೋವ್ ಅವರನ್ನು ಸೋಲಿಸಿದರು. ಈ ಮೂಲಕ ಕೊನೆಯ ನಾಲ್ಕರ ಹಂತ ತಲುಪಿದರು.
ಪಂದ್ಯದ ನಂತರ ಪ್ರತಿಕ್ರಿಯೆ ನೀಡಿದ ಪ್ರಮೋದ್ ಭಗತ್, ನಾನು ಚೆನ್ನಾಗಿ ಆಡಿದ್ದೇನೆ. ಒಲೆಕ್ಸಾಂಡರ್ ಚೈರ್ಕೋವ್ ಉತ್ತಮ ಆಟಗಾರ ಮತ್ತು ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆ. ಸೆಮಿಫೈನಲ್ ತಲುಪಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಾಕೌಟ್ ಪಂದ್ಯಗಳು ಆರಂಭವಾಗುತ್ತಿದ್ದಂತೆ ಸ್ಪರ್ಧೆ ಕಠಿಣವಾಗಲಿದೆ. ಈ ಪಂದ್ಯದ ಮೇಲೆ ನನ್ನ ಗಮನವಿದೆ. ಮಿಶ್ರ ಡಬಲ್ಸ್ ಕೊನೆಯ ಲೀಗ್ ಪಂದ್ಯ ಆಡುತ್ತಿದ್ದು, ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ.