ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಹುಡುಗಿ ಭಾವಿನಾಗೆ ಪ್ರಧಾನಿ, ರಾಷ್ಟ್ರಪತಿ ಸೇರಿ ಕ್ರಿಕೆಟಿಗರಿಂದ ಅಭಿನಂದನೆ - ಭಾವಿನಾಗೆ ಕ್ರಿಕೆಟಿಗರಿಂದ ಅಭಿನಂದನೆ

ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸೇರಿದಂತೆ ಅನೇಕರು ಬೆಳ್ಳಿ ಹುಡುಗಿ ಭಾವಿನಾ ಅವರನ್ನು ಅಭಿನಂದಿಸಿದ್ದಾರೆ.

ಭಾವಿನಾ ಪಟೇಲ್
ಭಾವಿನಾ ಪಟೇಲ್

By

Published : Aug 29, 2021, 4:41 PM IST

ಟೋಕಿಯೋ(ಜಪಾನ್): ಟೋಕಿಯೋ ಪ್ಯಾರಾಲಿಂಪಿಕ್ಸ್​​​ನಲ್ಲಿ ಭಾರತದ ಟೇಬಲ್​​ ಟೆನ್ನಿಸ್​ ಆಟಗಾರ್ತಿ ಭಾವಿನಾ ಪಟೇಲ್ ಬೆಳ್ಳಿ ಪದಕ ಗೆದ್ದಿದ್ದು, ದೇಶದಾದ್ಯಂತ ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸೇರಿದಂತೆ ಅನೇಕರು ಭಾವಿನಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.

‘ಭಾವಿನಾ ಪಟೇಲ್‌ ಇತಿಹಾಸ ರಚಿಸಿದ್ದಾರೆ. ಅವರು ಐತಿಹಾಸಿಕ ಬೆಳ್ಳಿ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಅಭಿನಂದನೆಗಳು. ಅವರ ಜೀವನ ಪಯಣವು ಸ್ಫೂರ್ತಿದಾಯಕವಾಗಿದ್ದು, ಯುವ ಜನರನ್ನು ಕ್ರೀಡೆಯತ್ತ ಸೆಳೆಯಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾವಿನಾ ಪಟೇಲ್‌ ಅವರು ಭಾರತದ ಕ್ರೀಡಾಪ್ರಿಯರಿಗೆ ಸ್ಫೂರ್ತಿದಾಯಕರಾಗಿ ಪರಿಣಮಿಸಿದ್ದಾರೆ. ನಿಮ್ಮ (ಭಾವಿನಾ) ಅಸಾಧಾರಣ ದೃಢತೆ ಮತ್ತು ಕೌಶಲ ಭಾರತಕ್ಕೆ ಕೀರ್ತಿ ತಂದಿವೆ. ಈ ಅಸಾಧಾರಣ ಸಾಧನೆಗಾಗಿ ನಿಮಗೆ ಅಭಿನಂದನೆಗಳು’ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದೀರಿ. ಈ ಸಾಧನಗೆ ನಿಮ್ಮ ಕಠಿಣ ಪರಿಶ್ರಮ​ ಹಾಗೂ ದೃಢವಾದ ಮಾನಸಿಕ ಶಕ್ತಿಯೇ ಕಾರಣ ಎಂದು ವೀರೇಂದ್ರ ಸೆಹ್ವಾಗ್​ ಟ್ವೀಟ್​ ಮಾಡಿದ್ದಾರೆ.

ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದೀರಿ. ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ, ಭಾವಿನಾ ಪಟೇಲ್‌ ನಿಮಗೆ ಅಭಿನಂದನೆಗಳು ಎಂದು ಕೆ.ಎಲ್.ರಾಹುಲ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ : ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ; ಟೇಬಲ್​ ಟೆನ್ನಿಸ್‌ನಲ್ಲಿ ಬೆಳ್ಳಿ ಗೆದ್ದು ಭಾವಿನಾ ಪಟೇಲ್ ದಾಖಲೆ

For All Latest Updates

ABOUT THE AUTHOR

...view details