ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪ್ರಧಾನಿ ಆತಿಥ್ಯ: ಮೋದಿಗೆ ಆಟೋಗ್ರಾಫ್​ ಇರುವ ಶಾಲು ಗಿಫ್ಟ್​ ನೀಡಿದ ಸಾಧಕರು - ಕೇಂದ್ರ ಸಚಿವ ಅನುರಾಗ್ ಠಾಕೂರ್

ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಪದಕ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ದೆಹಲಿಯ ನಿವಾಸದಲ್ಲಿ ಆತಿಥ್ಯ ನೀಡಿದ್ದು, ತಮ್ಮ ಆಟೋಗ್ರಾಫ್​ ಇರುವ ಬಿಳಿ ಬಣ್ಣದ ಶಾಲನ್ನು ಕ್ರೀಡಾಪಟುಗಳು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.

pm-modi-to-host-indias-paralympics-stars-today-to-mark-the-most-successful-season-yet
ಪ್ಯಾರಾಲಿಂಪಿಕ್​ನಲ್ಲಿ ಭಾರತ ಪ್ರತಿನಿಧಿಸಿದ ಆಟಗಾರರಿಗೆ ಪ್ರಧಾನಿ ಮೋದಿ ಆತಿಥ್ಯ

By

Published : Sep 9, 2021, 10:44 AM IST

Updated : Sep 9, 2021, 5:44 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ದೇಶಕ್ಕೆ ಪದಕ ಗೆದ್ದು ಕೊಟ್ಟ ಕ್ರೀಡಾಪಟುಗಳನ್ನು ಭೇಟಿ ಮಾಡಿದಂತೆಯೇ 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಪದಕ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ದೆಹಲಿಯ ನಿವಾಸದಲ್ಲಿ ಆತಿಥ್ಯ ನೀಡಿದ್ದಾರೆ.

ಪ್ಯಾರಾಲಿಂಪಿಕ್​ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ

ಈ ಬಾರಿ ಪ್ಯಾರಾ-ಅಥ್ಲೀಟ್‌ಗಳು ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 19 ಪದಕಗಳನ್ನು ಭಾರತಕ್ಕೆ ತಂದು ಕೊಟ್ಟು ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತವು ಪ್ಯಾರಾಲಿಂಪಿಕ್ಸ್​ ಪದಕಗಳ ಪಟ್ಟಿಯಲ್ಲಿ 24ನೇ ಸ್ಥಾನ ಪಡೆಯಿತು.

ಪ್ಯಾರಾಲಿಂಪಿಕ್​ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್​ ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುತ್ತದೆ: ಮೋದಿ

ಟೋಕಿಯೊದಿಂದ ಮರಳಿದ ಅವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡ ಪಿಎಂ ಮೋದಿ, ಅಲ್ಲಿ ಕ್ರೀಡಾಪಟುಗಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಅವರೊಂದಿಗೆ ಹರಟೆ ಹೊಡೆದು, ಕೆಲ ವಿಷಯಗಳ ಕುರಿತು ಸಂವಾದ ನಡೆಸಿದ್ದಾರೆ. ಇದೇ ವೇಳೆ ಪದಕ ವಿಜೇತ ಕ್ರೀಡಾಪಟುಗಳು ತಮ್ಮ ಆಟೋಗ್ರಾಫ್​ ಇರುವ ಬಿಳಿ ಬಣ್ಣದ ಶಾಲನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.

Last Updated : Sep 9, 2021, 5:44 PM IST

ABOUT THE AUTHOR

...view details