ಮಣಿಪುರ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚನು ಇಂದು ತವರಿಗೆ ಮರಳಿದ್ದಾರೆ. ಈ ವೇಳೆ ತಮ್ಮೂರಿನ ಸಾಧಕಿಯನ್ನು ನೋಡಲು ಜನರು ಇಂಫಾಲ್ನ ಬೀದಿಗಳಲ್ಲಿ ನೆರೆದಿದ್ದರು. ಈ ವೇಳೆ ಅವರು ಚನು ಹೆಸರಲ್ಲಿ ಘೋಷಣೆಗಳನ್ನು ಮೊಳಗಿಸಿದರು.
ತವರು ರಾಜ್ಯಕ್ಕೆ ಮರಳಿದ ಮೀರಾಬಾಯಿ: ಒಲಿಂಪಿಕ್ಸ್ ಸಾಧಕಿಯ ನೋಡಲು ಜನವೋ ಜನ.. - ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚನು
ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚನು ಇತ್ತು ತವರು ರಾಜ್ಯ ಮಣಿಪುರಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಸಿಎಂ ಬಿರೆನ್ ಸಿಂಗ್ ಆಗಮಿಸಿದ್ದರು. ಜೊತೆಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
ಜಪಾನ್ನಿಂದ ಮಣಿಪುರಕ್ಕೆ ಮರಳಿದ ಚನು
ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಈಗಾಗಲೇ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಜತೆಗೆ ರಾಜ್ಯ ಸರ್ಕಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ವಿಶೇಷ ಉದ್ಯೋಗವನ್ನೂ ನೀಡಲಾಗಿದೆ. 'ಯಾವುದೇ ಸಾಧನೆಗೂ ಹಲವು ತ್ಯಾಗಗಳನ್ನು ಮಾಡಬೇಕು. ಅಂತಹ ಅನೇಕ ತ್ಯಾಗಗಳನ್ನು ನಾನು ಮಾಡಿದ್ದೇನೆ' ಎಂದು ಚನು ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:Tokyo Olympics: ಮೀರಾಬಾಯಿ ಚನುಗೆ ಬೆಳ್ಳಿ ಬದಲು ಚಿನ್ನದ ಪದಕ? ಕಾರಣ..