ಕರ್ನಾಟಕ

karnataka

ETV Bharat / sports

Paralympics ಜಾವಲಿನ್ ಥ್ರೋ: 6 ಅವಕಾಶಗಳಲ್ಲೂ ಪೌಲ್​, ಫೈನಲ್​ನಿಂದ ಹೊರಬಿದ್ದ ರಂಜೀತ್

24 ವರ್ಷದ ಫರಿದಾಬಾದ್​ನ ರಂಜೀತ್ 2019ರ ಮೊರಕ್ಕಾನ್​ ಗ್ರ್ಯಾಂಡ್​ ಪ್ರಿಕ್ಸ್​ನಲ್ಲಿ 4ನೇ ಸ್ಥಾನ ಪಡೆದಿದ್ದರು. ಗುರುಗ್ರಾಮ್​ನಲ್ಲಿ ನಡೆದ ರಾಜ್ಯ ಮಟ್ಟದ ಟೂರ್ನಮೆಂಟ್​ ಮತ್ತು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದು ಟೋಕಿಯೋ ಪ್ಯಾರಾಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ್ದರು.

Paralympics
ರಂಜೀತ್ ಭಾಟಿಗೆ ಸೋಲು

By

Published : Aug 28, 2021, 7:37 PM IST

ಟೋಕಿಯೋ: ಭಾರತದ ಜಾವಲಿನ್ ಥ್ರೋವರ್​ ರಂಜೀತ್​ ಭಟಿ ಪ್ಯಾರಾಲಿಂಪಿಕ್ಸ್​ ಜಾವಲಿನ್​ ಥ್ರೋ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಪುರುಷರ F57 ಫೈನಲ್​ನಲ್ಲಿ ತಮ್ಮ ಆರೂ ಪ್ರಯತ್ನಗಳಲ್ಲಿ ಒಂದೇ ಒಂದು ಯಶಸ್ವಿ ಎಸೆತವಿಲ್ಲದೆ, ಎಲ್ಲವನ್ನು ಫೌಲ್​ ಮಾಡಿಕೊಂಡ ರಂಜೀತ್​ ಪದಕ ಸುತ್ತಿನಿಂದ ಹೊರಬಿದ್ದರು.

24 ವರ್ಷದ ಫರಿದಾಬಾದ್​ನ ರಂಜೀತ್ 2019ರ ಮೊರಕ್ಕಾನ್​ ಗ್ರ್ಯಾಂಡ್​ ಪ್ರಿಕ್ಸ್​ನಲ್ಲಿ 4ನೇ ಸ್ಥಾನ ಪಡೆದಿದ್ದರು. ಗುರುಗ್ರಾಮ್​ನಲ್ಲಿ ನಡೆದ ರಾಜ್ಯ ಮಟ್ಟದ ಟೂರ್ನಮೆಂಟ್​ ಮತ್ತು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದು ಟೋಕಿಯೋ ಪ್ಯಾರಾಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ್ದರು.

​ಇದಕ್ಕೂ ಮುನ್ನ ಭಾರತದ ಭಾವಿನಾಬೆನ್ ಪಟೇಲ್ ಪ್ಯಾರಅ ಟೇಬಲ್​ ಟೆನಿಸ್​ನಲ್ಲಿ ಫೈನಲ್ ತಲುಪಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದರು. ಈ ಮೂಲಕ ಫೈನಲ್ ಈ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಪ್ಯಾಡ್ಲರ್​ ಎನಿಸಿಕೊಂಡಿದ್ದರು. ಅವರು ಸೆಮಿಫೈನಲ್​ನಲ್ಲಿ ವಿಶ್ವದ 3ನೇ ಶ್ರೇ​ಯಾಂಕದ ಚೀನಾದ ಮಿಯಾವೊ ಜಾಂಗ್ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.

ಭಾರತದ ಪ್ಯಾರಾ ಆರ್ಚರ್​ ರಾಕೇಶ್ ಭಾರತದ ಪ್ಯಾರಾ ಆರ್ಚರ್​ ರಾಕೇಶ್ ಹಾಂಕಾಂಗ್‌ನ ಕಾ ಚುಯೆನ್ ನ್ಗಾಯ್ ಅವರನ್ನು 13 ಅಂಕಗಳ ಅಂತರದಿಂದ ಸುಲಭವಾಗಿ ಜಯಿಸಿ ಪ್ರೀ ಕ್ವಾರ್ಟರ್​ ಫೈನಲ್ಸ್​ಗೆ ಪ್ರವೇಶಿಸಿದ್ದಾರೆ.

ABOUT THE AUTHOR

...view details