ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪ್ರಾಚಿ ಯಾದವ್ ಇಂದು ನಡೆದ ಮಹಿಳೆಯರ 200 ಮೀಟರ್ ಕ್ಲಾಸ್ VL2 ಸಿಂಗಲ್ಸ್ ಕ್ಯಾನೋ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಪದಕ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಶುಕ್ರವಾರ ನಡೆದಿದ್ದ ಸೆಮಿಫೈನಲ್ನಲ್ಲಿ ಮೂರನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಪ್ರಾಚಿ ಇಂದು ನಡೆದ ಸ್ಪರ್ಧೆಯಲ್ಲಿ ಕೊನೆ ಸ್ಥಾನ (8ನೇ) ಪಡೆದಿದ್ದಾರೆ.
ಬ್ರಿಟನ್‌ನ ಎಮ್ಮಾ ವಿಗ್ಸ್ (10.301 )ಗೆ ಚಿನ್ನದ ಪದಕ, ಆಸ್ಟ್ರೇಲಿಯಾದ ಸುಸಾನ್ ಸೀಪೆಲ್(1: 01.481) ಬೆಳ್ಳಿ ಪದಕ, ಬ್ರಿಟನ್‌ನ ಜಿನೆಟ್ ಚಿಪ್ಪಿಂಗ್ಟನ್ (1: 02.149) ಕಂಚಿನ ಪದಕ ಪಡೆದರು.
ಯಾದವ್ ಸೊಂಟದ ಕೆಳಭಾಗ ಪ್ಯಾರಾಲಿಸಿಸ್ಗೆ ಒಳಗಾಗಿದೆ. ಇವರು ಮೊದಲು ಅವರು ಪ್ಯಾರಾ ಸ್ವಿಮ್ಮಿಂಗ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದರು. ಆದರೆ, ತಮ್ಮ ಕೋಚ್ ವೀರೇಂದ್ರ ಕುಮಾರ್ ಅವರ ಸಲಹೆಯ ಮೇರೆಗೆ ಕ್ಯಾನೋಯಿಂಗ್ಗೆ ತಮ್ಮ ಕ್ರೀಡೆಯನ್ನು ಬದಲಾಯಿಸಿಕೊಂಡರು.
ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಬಂದ ಸುಮಿತ್, ದೇವೇಂದ್ರ, ಯೋಗೀಶ್... ಅದ್ಧೂರಿ ಸ್ವಾಗತ