ಕರ್ನಾಟಕ

karnataka

ETV Bharat / sports

Paralympics: ಫೈನಲ್ ಪ್ರವೇಶಿಸಿದ ಕನ್ನಡಿಗ ಸುಹಾಸ್ ಯಥಿರಾಜ್​​​.. ಇಬ್ಬರಿಗೆ ನಾಳೆ ‘ಚಿನ್ನ’ದ ಪರೀಕ್ಷೆ - ಭಾರತದ ಕ್ರೀಡಾಪಟುಗಳು

ಭಾರತ ಪಾರಾಲಿಂಪಿಕ್​​ನಲ್ಲಿ ಈ ಬಾರಿ ಪದಕ ಬೇಟೆಗಿಳಿದಿದೆ. ಈಗಾಗಲೇ 15 ಪದಕ ಗೆದ್ದು ಪದಕ ಪಟ್ಟಿಯಲ್ಲಿ 34ನೇ ಸ್ಥಾನಕ್ಕೇರಿದೆ. ಅಲ್ಲದೇ ಹಲವು ವಿಭಾಗಗಳಲ್ಲಿ ನಾಳೆ ಫೈನಲ್ ಪಂದ್ಯ ಆಡಲಿದ್ದು, ಚಿನ್ನದ ಪದಕ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

paralympics-bhagat-suhas-krishna-enter-badminton-finals-manoj-tarun-lose-in-semifinals
ಫೈನಲ್ ಪ್ರವೇಶಿಸಿದ ಕನ್ನಡಿಗೆ ಸುಹಾಸ್ ಯಥಿರಾಜ್

By

Published : Sep 4, 2021, 12:44 PM IST

Updated : Sep 4, 2021, 4:17 PM IST

ಟೋಕಿಯೋ (ಜಪಾನ್​​): ಟೋಕಿಯೋ ಪಾರಾಲಿಂಪಿಕ್​ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ದಾಖಲೆ ಬರೆದಿದ್ದಾರೆ. ಭಾರತದ ಮೂವರು ಶಟ್ಲರ್ಸ್​ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಪ್ರಮೋದ್ ಭಗತ್, ಕೃಷ್ಣ ನಗರ್ ಹಾಗೂ ಕನ್ನಡಿಗ ಸುಹಾಸ್ ಯಥಿರಾಜ್ ಫೈನಲ್ ಅರ್ಹತೆ ಪಡೆದಿರುವ ಕ್ರೀಡಾಳುಗಳಾಗಿದ್ದಾರೆ. ಈ ಮೂಲಕ ಭಾರತಕ್ಕೆ ಮೂರು ಪದಕಗಳ ಸೇರ್ಪಡೆ ಖಾತ್ರಿಯಾಗಿದೆ. ವಿಶ್ವ ನಂಬರ್ ಒನ್ ಆಟಗಾರ 33 ವರ್ಷದ ಪ್ರಮೋದ್ ಭಗತ್ 21-11, 21-16 ನೇರ ಸೆಟ್​ಗಳ ಅಂತರದಿಂದ ಜಪಾನ್​​ನ ಆಟಗಾರನ ವಿರುದ್ಧ ಜಯದಾಖಲಿಸಿದರು. ಇಂದು ಮಧ್ಯಾಹ್ನ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ ಪದಕದ ನಿರೀಕ್ಷೆಯಿದೆ.

ಇನ್ನೋರ್ವ ಶಟ್ಲರ್ ಕೃಷ್ಣ ನಗರ್​​, ಸೆಮಿಫೈನಲ್​​ನಲ್ಲಿ ಗ್ರೇಟ್ ಬ್ರಿಟರ್ ಆಟಗಾರ ಕ್ರಿಸ್ಟನ್ ಕೂಂಬ್ಸ್​ ವಿರುದ್ಧ 21-10, 21-11ರ ಸೆಟ್​​​ನಲ್ಲಿ ಜಯಗಳಿಸಿ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. 22 ವರ್ಷದ ಇವರು ನಾಳೆ ಹಾಂ​ಕಾಂಗ್​​ನ ಚು ಮಾನ್ ಕೈ ಅವರನ್ನು ಎದುರಿಸಲಿದ್ದು, ಚಿನ್ನಕ್ಕಾಗಿ ಹೋರಾಡಲಿದ್ದಾರೆ.

ಕನ್ನಡಿಗ ಸುಹಾಸ್ ಯಥಿರಾಜ್​ ಫೈನಲ್​​ಗೆ

ಕನ್ನಡಿಗೆ ಸುಹಾಸ್ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 21-9, 21-15 ಸೆಟ್​​ಗಳ ಮೂಲಕ ಗೆಲುವು ಪಡೆದು ಫೈನಲ್​ಗೆ ಅರ್ಹತೆ ಪಡೆದರು. ಇವರು ಪ್ರಸ್ತುತ ನೋಯ್ಡಾದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್​ನ ಲೂಕಾಸ್​ ಮಝೂರ್​ ಅವರನ್ನ ಎದುರಿಸಲಿದ್ದಾರೆ.

Last Updated : Sep 4, 2021, 4:17 PM IST

ABOUT THE AUTHOR

...view details