ಟೋಕಿಯೋ(ಜಪಾನ್):ಭಾರತೀಯ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್, ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಸೆಮಿಫೈನಲ್ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು 3-2 ಸೆಟ್ಗಳಿಂದ ಮಣಿಸಿದ ಅವರು ಫೈನಲ್ಸ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದ ಪ್ಯಾರಾ ಟೆನ್ನಿಸ್ ಆಟಗಾರ್ತಿ ಹೊಸದೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾವಿನಾ ಪಟೇಲ್, ನಾನು ಪೂರ್ಣಶ್ರಮ ಹಾಕುತ್ತೇನೆ. ಮಾನಸಿಕವಾಗಿ ಫೈನಲ್ ಪಂದ್ಯಕ್ಕೆ ಸಿದ್ಧಳಾಗಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭಾವಿನಾ ಪಟೇಲ್ ಸಾಧನೆಗೆ ಪ್ರತಿಕ್ರಿಯೆ ನೀಡಿರುವ ಭಾವಿನಾ ತಂದೆ ಹಸ್ಮುಖ್ಭಾಯ್ ಪಟೇಲ್, ನನಗೆ ಇಂದು ಬಹಳ ಖುಷಿಯಾಗುತ್ತಿದೆ. ಭಾವಿನಾ ಖಚಿತವಾಗಿ ಚಿನ್ನದ ಪದಕ ಗೆಲ್ಲುತ್ತಾಳೆ. ಆಕೆ 20 ವರ್ಷಗಳಿಂದ ಟೇಬಲ್ ಟೆನ್ನಿಸ್ ಆಡುತ್ತಿದ್ದಾಳೆ ಎಂದು ಪುತ್ರಿ ಪದಕ ಗೆಲುವಿನ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ