ಇಂಪಾಲ್: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ 2020ಯಲ್ಲಿ ಮೊದಲ ಪದಕ ತಂದುಕೊಟ್ಟ ವೇಟ್ ಲಿಫ್ಟರ್ ಮೀರಾಬಾಯಿ ಚನು ಶನಿವಾರ ತಮ್ಮ ಹಳ್ಳಿಯ ಪಕ್ಕದ ದಾಮೋದರ್ ಕಣಿವೆಯಲ್ಲಿರುವ ಬಿಎಸ್ಎಫ್ ಕ್ಯಾಂಪ್ಗೆ ಭೇಟಿ ನೀಡಿದ್ದಾರೆ.
49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚನು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ವೇಟ್ಲಿಫ್ಟಿಂಗ್ ವಿಭಾಗದಿಂದ ಪದಕ ತಂದುಕೊಟ್ಟಿದ್ದರು. ಅಲ್ಲದೆ ಪಿವಿ ಸಿಂಧು ಬಳಿಕ ಭಾರತಕ್ಕೆ ಬೆಳ್ಳಿ ಪದಕ ಪಡೆದ ಎರಡನೇ ಮಹಿಳಾ ಕ್ರೀಡಾಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.