ಟೋಕಿಯೋ(ಜಪಾನ್): ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಕಡಿಮೆ ವಯಸ್ಸಿನಲ್ಲೇ ಚಿನ್ನದ ಪದಕ ಗೆಲ್ಲುವ ಮೂಲಕ 13 ವರ್ಷದ ಬಾಲಕಿ ಅಚ್ಚರಿಯ ದಾಖಲೆ ನಿರ್ಮಿಸಿದಳು. ಜಪಾನ್ನ ಮೊಮಿಜಿ ನಿಶಿಯಾ ಈ ಸಾಧನೆ ತೋರಿದ ಬಾಲಕಿ.
ಜಪಾನ್ನ ಟೋಕಿಯೋದಲ್ಲಿ 2020ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಹೊಸದಾಗಿ ಪರಿಚಯಿಸಿರುವ ಕ್ರೀಡೆ ಸ್ಕೇಟ್ ಬೋರ್ಡಿಂಗ್ನಲ್ಲಿ ನಿಶಿಯಾ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ 15.26 ಅಂಕಗಳಿಕೆ ಮಾಡಿದ್ದಾರೆ. ಈ ಮೂಲಕ ಮೊದಲ ಮಹಿಳಾ ಸ್ಕೇಟ್ ಬೋರ್ಡಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
1936ರಲ್ಲಿ ಬರ್ಲಿನ್ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ 3 ಮೀಟರ್ ಸ್ಪ್ರಿಂಗ್ಬೋರ್ಡ್ನಲ್ಲಿ ಅಮೆರಿಕದ ಮಾರ್ಜೋರಿ ಗೆಸ್ಟ್ರಿಂಗ್ (13 ವರ್ಷ 268 ದಿನ) ಪದಕ ಗೆದ್ದಿದ್ದರು. ವಿಶೇಷವೆಂದರೆ, ಈ ಸ್ಪರ್ಧೆಯಲ್ಲಿ 13 ವರ್ಷದ ಇಬ್ಬರು ಬಾಲಕಿಯರು ಹಾಗೂ 16 ವರ್ಷದ ಮತ್ತೋರ್ವ ಬಾಲಕಿ ಭಾಗಿಯಾಗಿದ್ದರು.